ಧರ್ಮಸ್ಥಳ, ನ.30(DaijiworldNews/TA):ಇನ್ನು ಸಚಿವ ಸಂಪುಟ ಪುನರ್ ರಚನೆ ಯಾವಾಗ ನಡೆಯುತ್ತೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಕುರಿತು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಸಂಪುಟ ಪುನರ್ ರಚನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಅಧ್ಯಕ್ಷರಿಗೆ ಬಿಟ್ಟದ್ದು ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಧರ್ಮಸ್ಥಳದಲ್ಲಿ ಮಾತನಾಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಅವಶ್ಯಕತೆ ಇದ್ದರೆ ಹೈಕಮಾಂಡ್ ಜೊತೆ ಮಾತನಾಡಿ ಮಾಡ್ತಾರೆ. ಸಚಿವ ಸಂಪುಟ ಪುನಾರಚನೆ ಆಗಬೇಕು ಅನಿಸಿದ್ರೆ ಮಾಡ್ತಾರೆ. ಇನ್ನು ವಿಕ್ರಂ ಗೌಡ ಎನ್ಕೌಂಟರ್ ನಂತರ ಇನ್ನೂ ಹೆಚ್ಚಿನ ಕಾರ್ಯಾಚರಣೆ ಆಗ್ತಾ ಇದೆ.
ನಕ್ಸಲರಿಗೆ ಶರಣಾಗತಿ ಆಗಲು ಮನವಿ ಮಾಡಿದ್ದೇವೆ, ಶರಣಾಗತಿ ಆದ್ರೆ ಅವರಿಗೆ ಪ್ಯಾಕೇಜ್ ಮಾಡಿದ್ದೇವೆ. ನಮ್ಮ ಸಮಾವೇಶಕ್ಕೆ ಯಾರೂ ವಿರೋಧ ಮಾಡಿಲ್ಲ. ಬಿಜೆಪಿ ನಮ್ಮ ಮೇಲೆ, ಪಕ್ಷದ ಮೇಲೆ ಅನಾವಶ್ಯಕ ಟೀಕೆ ಟಿಪ್ಪಣಿ ಮಾಡ್ತಾ ಇದೆ ಎಂದು ಅವರು ಹೇಳಿದ್ದಾರೆ.