ಮಂಗಳೂರು, ನ.30(DaijiworldNews/AA): ಬೆಂಗಳೂರಿನ ಸಿಐಡಿ ಎಸ್ಪಿಯಾಗಿದ್ದ ಕೆ ರವಿಶಂಕರ್ ಅವರನ್ನು ಮಂಗಳೂರಿನ ಡಿಸಿಪಿ (ಅಪರಾಧ ಮತ್ತು ಸಂಚಾರ) ಬಿಪಿ ದಿನೇಶ್ ಕುಮಾರ್ ಅವರ ಸ್ಥಾನಕ್ಕೆ ನಿಯೋಜಿಸಿ ಆದೇಶ ಹೊರಡಿಸಲಾಗಿದೆ.
ಸರ್ಕಾರದ ಅಧೀನ ಕಾರ್ಯದರ್ಶಿ ಬಿ ಕೆ ಭುವನೇಂದ್ರ ಕುಮಾರ್ ಅವರು ಹೊರಡಿಸಿರುವ ಆದೇಶದಂತೆ ಡಿಸಿಪಿ ಬಿ ಪಿ ದಿನೇಶ್ ಕುಮಾರ್ ಅವರ ಮುಂದಿನ ನಿಯೋಜನೆಗಾಗಿ ಪೊಲೀಸ್ ಪ್ರಧಾನ ಕಚೇರಿಗೆ ವರದಿ ಮಾಡಲು ಸೂಚನೆ ನೀಡಲಾಗಿದೆ.