ಮಂಗಳೂರು,ಡಿ.01 (DaijiworldNews/TA): ನಗರದ ದಕ್ಷಿಣ ಉಪವಿಭಾಗದ ಆ್ಯಂಟಿ ಡ್ರಗ್ ಟೀಮ್ನವರು ನಿಷೇಧಿತ ಎಂಡಿಎಂಎಯನ್ನು ಪೂರೈಕೆ ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಡಿಪುವಿನಲ್ಲಿ ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಮದ ಮೊಹಮ್ಮದ್ ಅಲ್ಫಾಝ್ (24) ಬಂಧಿತ. ಆತನಿಂದ 53 ಗ್ರಾಂ ಎಂಡಿಎಂಎ ಮಾದಕ ವಸ್ತು, ಸ್ಮೋಕ್ ಪಾಟ್, ಸಾಗಾಟಕ್ಕೆ ಬಳಸಿದ್ದ ಕಾರು, 2 ಮೊಬೈಲ್ ಸಹಿತ ಒಟ್ಟು 7,76,980 ಮೌಲ್ಯದ ಸೊತ್ತನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಣಾಜೆ ಪೊಲೀಸರು ಮುಡಿಪುವಿನಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮಾಹಿತಿ ಲಭ್ಯವಾಗಿದ್ದು ಕೂಡಲೇ ಕಾರ್ಯಷಕಿತರಾದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.