ಮಂಗಳೂರು, ಡಿ.02(DaijiworldNews/AA): ವಿದ್ಯುತ್ ಚಾಲಿತ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಯದ್ವಾತದ್ವಾ ಚಲಿಸಿದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಜಂಕ್ಷನ್ ನಲ್ಲಿ ಭಾನುವಾರ ಸಂಜೆ ನಡೆದಿದೆ.
ಸುರತ್ಕಲ್ ಸೇವಾ ವೃಂದ ಸಭಾಂಗಣದ ಬಳಿ ಫುಟ್ಪಾತ್ ಏರಿದ ಕಾರು ಓರ್ವನ ಮೇಲೆಯೇ ಹರಿದರೆ, ಇನ್ನೋರ್ವನಿಗೆ ಢಿಕ್ಕಿ ಹೊಡೆಯಿತು. ಉತ್ತರ ಭಾರತ ಮೂಲದ ಕಾರ್ಮಿಕನಿಗೆ ಗಂಭೀರ ಗಾಯವಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ಓಡಿ ತಪ್ಪಿಸಿಕೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ.