ಮಂಗಳೂರು, ಡಿ.02(DaijiworldNews/AK): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ ವ್ಯಾಪಕ ಮಳೆಯಾಗುತ್ತಿದ್ದು ಅರೆಂಜ್ ಅಲರ್ಟ್ ಘೋಷಣೆಯಾದ ಹಿನ್ನಲೆ ಮುಂಜ್ರಾಗತ ಕ್ರಮವಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಡಿಸೆಂಬರ್ 3 ರಂದು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.
ಉಡುಪಿ ಜಿಲ್ಲೆಯ ತೀವ್ರ ಮಳೆ ಮುನ್ಸೂಚನೆ ಹಿನ್ನಲೆ ನಾಳೆ (ಡಿಸೆಂಬರ್ 3) ಕ್ಕೆ ಜಿಲ್ಲೆಯ ಶಾಲಾ-ಪಿ ಯು ಕಾಲೇಜುಗಳಿಗೆ ಜಿಲ್ಲಾಧಿಕಾರಿ ಡಾಕ್ಟರ್ ವಿದ್ಯಾಕುಮಾರಿ ರಜೆ ಘೋಷಿಸಿದರೆ. ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಡ ಶಾಲೆ, ಪದವಿ ಪೂರ್ವ ತರಗತಿಗಳಿಗೆ ರಜೆ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಥಾಮಿಕ,ಫ್ರೌಡ, ಶಾಲೆ, ಹಾಗೂ ಪದವಿ ಪೂರ್ವ(12ನೇ ತರಗತಿ)ಯವರೆಗೆ ರಜೆಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಘೋಷಿಸಿದ್ದಾರೆ.
ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ತೀವ್ರ ಮಳೆಯಾಗುವ ಸಾಧ್ಯತೆ ಇರುವುದರಿಂದ ಎಲ್ಲಾ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸಾರ್ವಜನಿಕರ ಹಾಗೂ ಎಲ್ಲಾ ಜಾನುವಾರುಗಳ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.
ಸಾರ್ವಜನಿಕ ಸುರಕ್ಷತಾ ಸಲಹೆ: ನಿರೀಕ್ಷಿತ ಭಾರೀ ಮಳೆಯ ಕಾರಣ, ಅಪಘಾತಗಳನ್ನು ತಡೆಗಟ್ಟಲು ನದಿಗಳು, ಹೊಳೆಗಳು ಮತ್ತು ವಿದ್ಯುತ್ ಮಾರ್ಗಗಳ ಸಮೀಪವಿರುವ ಪ್ರದೇಶಗಳನ್ನು ತಪ್ಪಿಸಲು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.
ತುರ್ತುಸ್ಥಿತಿಗಳನ್ನು ವರದಿ ಮಾಡುವುದು: ಯಾವುದೇ ನೈಸರ್ಗಿಕ ವಿಕೋಪಕ್ಕೆ ಸಂಬಂಧಿಸಿದ ಘಟನೆಗಳು ಅಥವಾ ಸಂಭಾವ್ಯ ಅಪಾಯಗಳ ಸಂದರ್ಭದಲ್ಲಿ, ಆಯಾ ಪಂಚಾಯತ್ ಅಥವಾ ನಗರ ಸ್ಥಳೀಯ ಸಂಸ್ಥೆಗಳಿಗೆ ತಕ್ಷಣವೇ ತಿಳಿಸಲು ನಿವಾಸಿಗಳನ್ನು ಒತ್ತಾಯಿಸಲಾಗಿದೆ.
ಯಾವುದೇ ನೈಸರ್ಗಿಕ ವಿಪತ್ತು-ಸಂಬಂಧಿತ ಕಾಳಜಿಗಳಿಗಾಗಿ, ಈ ಕೆಳಗಿನ ತುರ್ತು ಸಂಖ್ಯೆಗಳು ಲಭ್ಯವಿದೆ:
24/7 ತುರ್ತು ನಿಯಂತ್ರಣ ಕೊಠಡಿ:
1077 / 0824-2442590
0824-2220587
0824-2204424
ತಾಲೂಕುವಾರು ಸಂಪರ್ಕ ಸಂಖ್ಯೆಗಳು:
ಬಂಟ್ವಾಳ ತಾಲೂಕು: 08255-232500
ಬೆಳ್ತಂಗಡಿ ತಾಲೂಕು: 08251-230349
ಮಂಗಳೂರು ತಾಲೂಕು: 08256-232047
ಮೂಡುಬಿದಿರೆ ತಾಲೂಕು: 08258-238100
ಮೂಲ್ಕಿ ತಾಲೂಕು: 0824-2294496
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದೆ.