ಮೂಲ್ಕಿ, ಡಿ.03(DaijiworldNews/AA): ಬ್ಯಾಂಕಿನ ಎಟಿಎಂಗಳಿಗೆ ಹಣ ತುಂಬಿಸಲು ಬರುವ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಚಾಲಕ ಸೇರಿ ಐವರು ಗಾಯಗೊಂಡ ಘಟನೆ ಮೂಲ್ಕಿ ಹೆದ್ದಾರಿಯ ಮಿಷನ್ ಕಾಂಪೌಂಡ್ ಬಳಿ ಸಂಭವಿಸಿದೆ.
ಮಂಗಳೂರಿನ ಕಡೆಗೆ ಹೋಗುತ್ತಿದ್ದ ವಾಹನವು ರಸ್ತೆ ವಿಭಾಜಕಕ್ಕೆ ತಾಗಿ ಪಲ್ಟಿ ಹೊಡೆದಿದೆ. ಪರಿಣಾಮ ಕೆಲಕಾಲ ಹೆದ್ದಾರಿಯ ಸಂಚಾರಕ್ಕೆ ತೊಂದರೆ ಉಂಟಾಯಿತು. ಸ್ಥಳೀಯರು ಸೇರಿ ಪಲ್ಟಿಯಾಗಿದ್ದ ವಾಹನದ ಒಳಗೆ ಇದ್ದವರನ್ನು ಹೊರತೆಗೆದರು. ವಾಹನವನ್ನು ಟೋಲ್ ಸಿಬ್ಬಂದಿ ಕ್ರೇನ್ ಮೂಲಕ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಘಟನೆಯಲ್ಲಿ ಭಧ್ರತಾ ಸಿಬ್ಬಂದಿ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.