ಕಾಸರಗೋಡು, ಡಿ.03 (DaijiworldNews/TA): ಚಿಣ್ಣರ ಚಿಲುಮೆ ಸಂಘಟಕ ಸಮಿತಿಯ ನೇತೃತ್ವದಲ್ಲಿ ಡಿಸೆಂಬರ್ 29ರಂದು ಬಾಕುಡ ಸಮುದಾಯದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜರುಗಲಿದೆ. ಈ ಪ್ರಯುಕ್ತ ನಿನ್ನೆ ಹೊಸಂಗಡಿ ಫ್ಲೆಕ್ಸ್ ಪಾಯಿಂಟ್ ಹಾಲ್ ನಲ್ಲಿ ಸ್ವಾಗತ ಸಮಿತಿ ಸಭೆ ಜರುಗಿತು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಪಜಿಲ್ಲಾ , ಜಿಲ್ಲಾ ಹಾಗೂ ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಬಾಕುಡ ಸಮುದಾಯದ ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಹಾಗೂ ಹಲವಾರು ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಪ್ರೇರಣಾ ಸಭಾಂಗಣದಲ್ಲಿ, ನಡೆದ ಸಭೆಯಲ್ಲಿ ಚಿಣ್ಣರ ಚಿಲುಮೆ ಸಂಘಟಕ ಸಮಿತಿಯ ಅಧ್ಯಕ್ಷರಾದ ಶ್ರೀ ವಿಜಯ ಪಂಡಿತ್ ಇವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ,"ಚಿಣ್ಣರ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಪ್ರೇರಣೆ ನೀಡುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಎಂಬ ನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಸಮುದಾಯದ ಇನ್ನಷ್ಟು ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವಂತಾಗಲಿ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದ್ದು ಐತಿಹಾಸಿಕ ಕಾರ್ಯಕ್ರಮಕ್ಕೆ ಮುನ್ನುಡಿ ಇಡೋಣ ಎಂದು ಕರೆ ನೀಡಿದರು.
ಮದೂರು ಗ್ರಾಮ ಪಂಚಾಯತ್ ಸದಸ್ಯರಾದ ಉದಯ್ ಬೆದ್ರಢ್ಕ,ಯುವ ಮುಂದಾಳು ವಿಠಲ್ ನಾರಾಯಣ ಬ0ಬ್ರಾಣ, ಹರೀಶ್ ಮಾಸ್ತರ್ ಹೊಸಂಗಡಿ ಮೊದಲಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜೇಶ್ ಮಾಸ್ಟರ್ ಕೊಡ್ಲಮೊಗರು, ಪವನ್ ಹೊಸಂಗಡಿ, ಸುಮಂಗಲ ಪೊಸೋಟ್, ತುಳಸಿ ದಾಸ್ ಮಂಜೇಶ್ವರ , ಮಂಜುನಾಥ್ ಕೊಡ್ಲಮೊಗರು,ಉದಯ ಸೊಂಕಾಲ್, ಪ್ರಿಜ್ಜು ಬಳ್ಳಾರ್, ಪ್ರವೀಣ್ ಸೊಂಕಾಲ್, ತಾರಾನಾಥ್ ತಚ್ಚನಿ, ರಾಜೇಶ್ ಮಾಸ್ಟರ್ ಮಂಜೇಶ್ವರ, ಚಂದ್ರಹಾಸ ಕತ್ತರಿಕೋಡಿ, ಬೇಬಿ ತಚ್ಚನಿ ,ರಘು ರಾಮ್ ಛತ್ರ0ಪಳ್ಳ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ವಿಗೆ ಬೇಕಾಗಿ ಈ ಸಂದರ್ಭದಲ್ಲಿ ವಿವಿಧ ಉಪ ಸಮಿತಿಗಳನ್ನು ರೂಪಿಕರಿಸಲಾಯಿತು. ಚಿಣ್ಣರ ಚಿಲುಮೆ ಸಂಘಟಕ ಸಮಿತಿಯ ನಿರ್ದೇಶಕ ಅಶೋಕ್ ಕೊಡ್ಲಮೊಗರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ನಿರಂಜನ್ ಮಾಸ್ತರ್ ಕುಂಜತ್ತೂರು ವಂದಿಸಿದರು.