ಕಾಸರಗೋಡು, ಡಿ.03(DaijiworldNews/AA): ಜಿಲ್ಲಾಧಿಕಾರಿಯವರ ನಿವೃತ್ತ ದಫೆದಾರ್ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಕೂಡ್ಲು ರಾಮ ದಾಸ್ ನಗರ ಕಾಳ್ಯಾಂಗಾಡ್ ನ ಪ್ರವೀಣ್ ರಾಜ್ (60) ಮೃತಪಟ್ಟವರು.
ಪತ್ನಿ ಆಶಾ ಮನೆಯ ಹೊರಗಡೆ ವಸ್ತ್ರ ತೊಳೆಯುತ್ತಿದ್ದು, ಶಬ್ದ ಕೇಳಿ ಮನೆಯೊಳಗೆ ಬಂದಾಗ ಕೋಣೆಯಲ್ಲಿ ನೇಣು ಬಿಗಿದಿರುವುದು ಕಂಡುಬಂದಿದೆ. ಬೊಬ್ಬೆ ಕೇಳಿ ಪರಿಸರವಾಸಿಗಳು ಆಗಮಿಸಿದ್ದು, ಬಳಿಕ ಪ್ರವೀಣ್ರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಜೀವ ಉಳಿಸಲಾಗಲಿಲ್ಲ.
ಕಾಸರಗೋಡು ನಗರ ಠಾಣಾ ಪೊಲೀಸರು ಮಹಜರು ನಡೆಸಿದರು. ಪ್ರವೀಣ್ ಅವರ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಹಲವು ವರ್ಷಗಳ ಕಾಲ ಜಿಲ್ಲಾಧಿಕಾರಿಗಳ ದಫೆಧಾರ್ ರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೂವರು ಜಿಲ್ಲಾಧಿಕಾರಿಗಳಿಂದ ಉತ್ತಮ ಸೇವೆಗಾಗಿ ಗೌರವಿಸಲ್ಪಟ್ಟಿದ್ದರು.