ಮಂಗಳೂರು, ಡಿ.03 (DaijiworldNews/TA): ತಮಿಳುನಾಡಿನ ಫೆಂಗಲ್ ಚಂಡಮಾರುತ ದಕ್ಷಿಣ ಕನ್ನಡದಲ್ಲಿ ಭಿಕರ ಪರಿಣಾಮ ಬೀರಿದ್ದು ನಿರಂತರ ಮಳೆಯಿಂದಾಗಿ ಮಂಗಳೂರು- ಉಡುಪಿ ರಾಷ್ಟ್ರೀಯ ಹೆದ್ದಾರಿಯ ಕೂಳೂರು ರಸ್ತೆ ಕುಸಿದಿದೆ. ಗೇಲ್ ಗ್ಯಾಸ್ ಕಂಪನಿ ರಸ್ತೆ ಅಗೆದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂಬುವುದಾಗಿ ಆರೋಪಿಸಲಾಗಿದೆ.
ರಸ್ತೆ ಅಗೆದ ಕಾರಣದಿಂದ ಆ ಗುಂಡಿಯಲ್ಲೇ ಇದೀಗ ಮಳೆ ನೀರು ಶೇಖರಣೆಯಾಗಿ ಹೆದ್ದಾರಿ ಕುಸಿದಿದೆ ಎಂದು ಹೇಳಲಾಗಿದೆ. ಬೈಕ್, ಕಾರು, ಲಾರಿಗಳು ಸಂಚರಿಸುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ರಸ್ತೆ ಕುಸಿದಿದೆ. ಇದರಿಂದ ಭಾರೀ ಅನಾಹುತ ತಪ್ಪಿದೆ ಎನ್ನಲಾಗಿದೆ.
ರಸ್ತೆ ಕುಸಿದರೂ ಪಕ್ಕದಲ್ಲೇ ಭಾರೀ ವಾಹನಗಳು ಸಂಚಿರಿಸುತ್ತಿರುವುದರಿಂದ ಇನ್ನಷ್ಟು ಕುಸಿಯುವ ಭೀತಿ ಎದುರಾಗಿದೆ ಎಂಬುವುದಾಗಿಯೂ ಸ್ಥಳೀಯರು ಆರೋಪಿಸಿದ್ದಾರೆ. ದಕ್ಷಿಣ ಕನ್ನಡದಾದ್ಯಂತ ಫೆಂಗಲ್ ಚಂಡಮಾರುತಕ್ಕೆ ಜನಜೀವನ ಅಸ್ತವ್ಯಸ್ತವಾಗಿದ್ದು ಅಲ್ಲಲ್ಲಿ ಗುಡ್ಡ ಕುಸಿತ , ತಡೆಗೋಡೆ ಕುಸಿದು ಜನಸಾಮಾನ್ಯರಿಗೆ ತೊಡಕು ಉಂಟುಮಾಡಿದೆ.