ಕಡಬ, ಡಿ.03 (DaijiworldNews/TA): ಬಿಳಿನೆಲೆ ಗ್ರಾಮದ ಮುಂಗ್ಲಿ ಮಜಲು ನಿವಾಸಿ ಸಂದೀಪ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪಂಚಾಯತ್ ಮುಂದೆ ಶವ ಇಟ್ಟು ಗ್ರಾಮಸ್ಥರ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಸಂದೀಪ್ ಹತ್ಯೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಇತರ ಆರೋಪಿಗಳ ಬಗ್ಗೆ ತನಿಖೆ ನಡೆಸಬೇಕು ಎಂಬುವುದಾಗಿ ಗ್ರಾಮಸ್ಥರು ಆಕ್ರೋಶವನ್ನು ಹೊರಹಾಕಿದ್ದಾರೆ.
ಪಂಚಾಯತ್ ಅಧಿಕಾರಿಗಳು ಯಾರು ಘಟನಾ ಸ್ಥಳಕ್ಕೆ ಬಂದಿಲ್ಲ ಎಂಬುವುದಾಗಿಯೂ ಗ್ರಾಮಸ್ಥರು ಆರೋಪಿಸಿದ್ದು ಸಮಗ್ರ ತನಿಖೆಯಾಗಬೇಕು ಎಂದು ಶವ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.
ಬಿಳಿನೆಲೆ ಗ್ರಾಮದ ಮುಂಗ್ಲಿ ಮಜಲು ನಿವಾಸಿ ಸಂದೀಪ್ (29) ಕಳೆದ ನ.27ರಿಂದ ನಾಪತ್ತೆಯಾಗಿದ್ದ. ಮುರ್ದಾಳದಲ್ಲಿ ಸಂದೀಪ್ ಶಾಮಿಯಾನ ಕೆಲಸ ಮಾಡಿಕೊಂಡಿದ್ದ ಯುವಕನಾಗಿದ್ದ. ಸಂದೀಪ್ ಮೃತದೇಹ ಕುಕ್ಕೆ ಸುಬ್ರಹ್ಮಣ್ಯ ರೊಡ್ ಬಳಿ ನಾರಡ್ಕ ಎಂಬಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಆರೋಪಿ ಪ್ರತೀಕ್ ಕೊಲೆ ಮಾಡಿ ಮೃತದೇಹವನ್ನು ಬಿಸಾಡಿದ್ದ ಎಂದು ತನಿಖೆಯ ನಂತರ ತಿಳಿದುಬಂದಿತ್ತು.