ಸುಳ್ಯ, ಡಿ.03(DaijiworldNews/AA): ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನಿಗೆ ಗಾಯವಾದ ಘಟನೆ ಓಡಬೈ ಪೆಟ್ರೋಲ್ ಪಂಪ್ ಬಳಿ ಸಂಭವಿಸಿದೆ.
ಮೈಸೂರಿನಿಂದ ಮಂಗಳೂರು ಕಡೆ ತೆರಳುತ್ತಿದ್ದ ಬಸ್ ಮತ್ತು ಬೈಕ್ ಮುಕಾಮುಖಿ ಡಿಕ್ಕಿ ಹೊಡೆದಿದೆ. ಘಟನೆಯಿಂದ ಬೈಕ್ ಸವಾರ ಸಣ್ಣ ಪುಟ್ಟ ಗಾಯವಾಗಿ ಅಪಾಯದಿಂದ ಪಾರಾಗಿದ್ದಾರೆ.
ಅಪಘಾತದಲ್ಲಿ ಬಸ್ ಹಾಗೂ ಬೈಕ್ ಮುಂಭಾಗ ನಜ್ಜುಗುಜ್ಜಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟು ಲಭ್ಯವಾಗಬೇಕಿದೆ.