ಕಾಸರಗೋಡು,ಡಿ.04 (DaijiworldNews/TA): ಅಕ್ರಮವಾಗಿ ದಾಸ್ತಾನಿಡಲಾಗಿದ್ದ ಸುಮಾರು 130 ಕಿಲೋ ಶ್ರೀಗಂಧದ ಕೊರಡು ಸಹಿತ ಇಬ್ಬರನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದು, 2 ಕಾರುಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದ್ದು ಇಬ್ಬರು ಆರೋಪಿಗಳು ಸೆರೆಯಾಗಿದ್ದಾರೆ.
ಬಂಧಿತರನ್ನು ಕಳ್ಳಂತು ಲಂಗ್ ನ ಪ್ರಸಾದ್ (34) ಮತ್ತು ಪುಲ್ಲೂರು ಮುಂಡೋಟ್ ನ ಶಿಬು ರಾಜ್ (43) ಎಂದು ಗುರುತಿಸಲಾಗಿದೆ. ವಶಪಡಿಸಿ ಕೊಂಡ ಶ್ರೀಗಂಧದ ಮೌಲ್ಯ ಸುಮಾರು 6.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ವಿವಿಧೆಡೆಗಳಿಂದ ಸಂಗ್ರಹಿಸುವ ಕೊರಡುಗಳನ್ನು ಪ್ರಸಾದ್ನ ಮನೆಯಲ್ಲಿ ದಾಸ್ತಾನಿರಿಸಿ ಅಲ್ಲಿಂದ ಮಾರಾಟ ಮಾಡಲಾ ಗುತ್ತಿತ್ತು ಎಂದು ತನಿಖೆ ಬಳಿಕ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಯುತ್ತಿದೆ.