ಕಾಸರಗೋಡು, 04 (DaijiworldNews/AK):ಅನಿರೀಕ್ಷಿತವಾಗಿ ಸುರಿದ ಬಾರಿ ಮಳೆಗೆ ಕಾಸರಗೋಡು ಅಡ್ಕತಬೈಲ್ ನಲ್ಲಿ ಮನೆಯೊಂದರ ಮೇಲ್ಚವಣಿ ಸಂಪೂರ್ಣವಾಗಿ ಕುಸಿದ ಘಟನೆ ನಡೆದಿದ್ದು, ಅಪಾರ ನಷ್ಟ ಸಂಭವಿಸಿದೆ.
ಜಿಲ್ಲೆಯಲ್ಲಿ 2 ದಿನಗಳಿಂದ ಮಳೆಯಾಗುತ್ತಿದ್ದು, ಹಲವೆಡೆ ಅಪಾರ ನಾಶ ನಷ್ಟ ಸಂಭವಿಸಿದೆ. ಮಂಗಳವಾರ ಮಳೆ ಸುರಿದಿದ್ದು, ಮಳೆಯಿಂದಾಗಿ ಬುಧವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಮನೆಯ ಮೇಲ್ಚಾವಣಿ ಆಕಸ್ಮಿಕವಾಗಿ ಕುಸಿದಿದೆ.
ಅಡ್ಕತಬೈಲ್ ನಿವಾಸಿ ಕಿಶೋರ್ ಕುಮಾರ್ ಅವರ ಹಂಚು ಹಾಸಿದ ಮನೆಯಾಗಿದ್ದು. ಘಟನೆಯ ವೇಳೆ ಮನೆಯಲ್ಲಿ ಕಿಶೋರ್ ಕುಮಾರ್ ಹಾಗೂ ಅವರ ಪತ್ನಿ ಶಶಿಕಲಾ ಇದ್ದರು.ಮೇಲಚವಾಣಿ ಕುಸಿಯುವ ವೇಳೆ ಶಬ್ದ ಕೇಳಿ ಹೊರಗೆ ಓಡಿ ಬಂದಿದ್ದು, ಅದೃಷ್ಟವಾಶತ್ ಅಪಾಯದಿಂದ ಪಾರಾಗಿದ್ದಾರೆ.