ಉಡುಪಿ, ಡಿ.22(DaijiworldNews/AA): ಕ್ರಿಸ್ಮಸ್ ಹಬ್ಬದ ಸುಸಂಧರ್ಭದಲ್ಲಿ ದಾಯ್ಜಿವಲ್ಡ್ ಉಡುಪಿ ಮತ್ತು ಕಿಶೂ ಎಂಟರ್ ಪ್ರೈಸಸ್ ಕ್ರಿಸ್ಮಸ್ ಸಂದೇಶ ಸಾರುವ ಗೋದಲಿಯನ್ನು ನಿರ್ಮಿಸುವ ಆಸಕ್ತರನ್ನು ಪ್ರೋತ್ಸಾಹಿಸುವ ಸಲುವಾಗಿ "ಗೋದಲಿ ಸಡಗರ -2024" ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಪರ್ಧೆಯು ವೈಯುಕ್ತಿಕ ಮತ್ತು ಗುಂಪು ವಿಭಾಗದಲ್ಲಿ ನಡೆಯಲಿದೆ. ಗೋದಲಿ ಸಡಗರ 2024 ಸ್ಪರ್ಧೆಯನ್ನು ತನಿಷ್ಕ್ ಜುವೆಲ್ಲರಿ ಉಡುಪಿ, ಔರಾ ಬೇಕರಿ ಉಡುಪಿ ಮತ್ತು, ಮಡಿಕುಳಾಸ್ ಸ್ವೀಟ್ಸ್ ಬ್ರಹ್ಮಾವರ ಪ್ರಾಯೋಜಿಸಿದ್ದಾರೆ.
ಗೋದಲಿ ರಚನೆಯು ಕ್ರಿಸ್ಮಸ್ ಸಂಧರ್ಭದ ಒಂದು ವಿಶೇಷ ಸಂಪ್ರದಾಯವಾಗಿದೆ. ಕ್ರೈಸ್ತ ಬಾಂಧವರು ಕೊಟ್ಟಿಗೆಯಲ್ಲಿ ಹುಟ್ಟಿದ ಯೇಸು ಕ್ರಿಸ್ತರ ಜನನದ ಸಂದೇಶವನ್ನು ಬಿತ್ತರಿಸುವ ಗೋದಲಿಯನ್ನು ತಮ್ಮ ಮನೆಗಳಲ್ಲಿ, ಚರ್ಚ್ ಮತ್ತು ಸಂಘ ಸಂಸ್ಥೆಗಳಲ್ಲಿ ಬಹಳ ಕ್ರಿಯಾತ್ಮಕವಾಗಿ ರಚಿಸುತ್ತಾರೆ. ಡಿಸೆಂಬರ್ ತಿಂಗಳ ಮೊದಲ ವಾರದಿಂದಲೇ ಗೋದಲಿ ತಯಾರಿಕೆಗೆ ವಿವಿಧ ರೀತಿಯ ತಯಾರಿಗಳು ಆರಂಭವಾಗುತ್ತವೆ. ಚರ್ಚ್ ಗಳಲ್ಲಿ ಯುವ ತಂಡಗಳು ನಿರ್ಮಾಣ ಮಾಡುವ ಬೃಹತ್ ಗೋದಲಿಗಳು ನೋಡುಗರ ಕಣ್ಮನ ಸೆಳೆದರೆ, ಕ್ರೈಸ್ತ ಬಾಂಧವರು ತಮ್ಮ ಮನೆಗಳಲ್ಲಿ ಕೂಡಾ ವಿವಿಧ ಮಾದರಿಯ ಗೋದಲಿಗಳನ್ನು ನಿರ್ಮಿಸುತ್ತಾರೆ.
ಗೋದಲಿ ನಿರ್ಮಾಣದ ಈ ವಿಶಿಷ್ಟ ಸಂಪ್ರದಾಯವನ್ನು ಮುಂದಿನ ಪೀಳೀಗೆಗೆ ಪ್ರಚುರಪಡಿಸವ ಮತ್ತು ಗೋದಲಿಗಳನ್ನು ನಿರ್ಮಿಸುವವರನ್ನು ಪ್ರೋತ್ಸಾಹಿಸುವ ಸಲುವಾಗಿ ದಾಯ್ಜಿವರ್ಲ್ಡ್ ಉಡುಪಿ ಮತ್ತು ಕಿಶೂ ಎಂಟರ್ಪ್ರೈಸಸ್ ಕಳೆದ 7 ವರ್ಷಗಳಿಂದ ಗೋದಲಿ ಸಡಗರ ಛಾಯಾಚಿತ್ರ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ.
ಗೋದಲಿ ಸಡಗರ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಡಿಸೆಂಬರ್ 30, 2024 ಕೊನೆಯ ದಿನ. ವಿಜೇತರಿಗೆ ಆಕರ್ಷಕ ಪ್ರಥಮ, ದ್ವಿತೀಯ, ತೃತೀಯ ಮತ್ತು ಪ್ರತಿ ವಿಭಾಗದಲ್ಲಿ ೫ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.
ನಿಯಮಗಳು ಮತ್ತು ಷರತ್ತುಗಳು :
- ಗೋದಲಿ ರಚನೆಯಲ್ಲಿನ ಸೃಜನಶೀಲತೆ, ಕ್ರಿಸ್ಮಸ್ ಸಂದೇಶಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು.
- ವಾಟರ್ಮಾರ್ಕ್ ಬಳಸಿರುವ ಛಾಯಾಚಿತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.
- ಸ್ಪರ್ಧೆಯು ವೈಯಕ್ತಿಕ ಮತ್ತು ತಂಡ ವಿಭಾಗದಲ್ಲಿ ಜರುಗಲಿದೆ.
- ವೈಯಕ್ತಿಕ ವಿಭಾಗ ( ಮನೆ ), ತಂಡ ವಿಭಾಗ ( ಚರ್ಚ್/ ಸಂಘ / ಸಂಸ್ಥೆ / ವಾಳೆ )
- ಗರಿಷ್ಠ 4 ಛಾಯಾಚಿತ್ರಗಳನ್ನು (Day + Night) ಮತ್ತು 2 ನಿಮಿಷದ ವಿಡಿಯೋ ಕಳುಹಿಸಿ.
- ಪ್ರತೀ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಹಾಗೂ 5 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.
- ಗೋದಲಿಯೊಂದಿಗೆ ವೈಯಕ್ತಿಕ / ತಂಡದ ಒಂದು ಛಾಯಾಚಿತ್ರ ಇರತಕ್ಕದ್ದು.
- ಛಾಯಾಚಿತ್ರಗಳೊಂದಿಗೆ ಹೆಸರು / ತಂಡದ ಹೆಸರು, ಊರಿನ ಹೆಸರು, ಸರಿಯಾದ ವಿಳಾಸ ಹಾಗೂ ದೂರವಾಣಿ ಸಂಖ್ಯೆ ಇರತಕ್ಕದ್ದು. ಈ ಮಾಹಿತಿಗಳು ಇಲ್ಲದೇ ಹೋದಲ್ಲಿ ಛಾಯಾಚಿತ್ರಗಳನ್ನು ತೀರ್ಪಿಗೆ ಪರಿಗಣಿಸಲಾಗುವುದಿಲ್ಲ.
- ತೀರ್ಪುಗಾರರ ತೀರ್ಮಾನವೇ ಅಂತಿಮ.
- ಕೊನೆಯ ದಿನಾಂಕ : ಡಿಸೆಂಬರ್ 30, 2024
ಬಹುಮಾನ:
ವೈಯುಕ್ತಿಕ ವಿಭಾಗ:
ಪ್ರಥಮ : ರೂ 6,000 + ಟ್ರೋಫಿ + ಪ್ರಮಾಣಪತ್ರ
ದ್ವಿತೀಯ : ರೂ 4,000 + ಟ್ರೋಫಿ + ಪ್ರಮಾಣಪತ್ರ
ತೃತೀಯ : ರೂ 3,000 + ಟ್ರೋಫಿ + ಪ್ರಮಾಣಪತ್ರ
ಸಮಾಧಾನಕರ : ರೂ 1,000 + ಟ್ರೋಫಿ + ಪ್ರಮಾಣಪತ್ರ (5 ಮಂದಿಗೆ)
ತಂಡ ವಿಭಾಗ :
ಪ್ರಥಮ : ರೂ 8,000 + ಟ್ರೋಫಿ + ಪ್ರಮಾಣಪತ್ರ
ದ್ವಿತೀಯ : ರೂ 6,000 + ಟ್ರೋಫಿ + ಪ್ರಮಾಣಪತ್ರ
ತೃತೀಯ : ರೂ 5,000 + ಟ್ರೋಫಿ + ಪ್ರಮಾಣಪತ್ರ
ಸಮಾಧಾನಕರ : ರೂ 1,000 + ಟ್ರೋಫಿ + ಪ್ರಮಾಣಪತ್ರ (5 ತಂಡಗಳಿಗೆ)
ನೀವು ತಯಾರಿಸಿದ ಗೋದಲಿಯ ಛಾಯಾಚಿತ್ರಗಳು ಮತ್ತು ವೀಡಿಯೋವನ್ನು : contestdwudupi@gmail.com ಗೆ ಕಳುಹಿಸಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : + 91 73386 23552 / 73386 37682