ಮಂಗಳೂರು, ಜ.19(DaijiworldNews/TA): ಪ್ರಾಧ್ಯಾಪಕಿ ರೀಮಾ ಜೆನ್ನಿಫರ್ ಡಿಸಿಲ್ವಾ ಅವರಿಗೆ ಶ್ರೀನಿವಾಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಲಭಿಸಿದೆ.
'Women Entrepreneurship In Food Processing Sector - A Study of Dakshina Kannada District' ವಿಷಯದಲ್ಲಿ PhD ಪದವಿ ಪಡೆದಿರುವ ರೀಮಾ ಜೆನ್ನಿಫರ್ ಡಿಸಿಲ್ವಾ ಅವರು ಡಾ. ಗಣೇಶ ಹೆಚ್.ಆರ್. ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ್ದಾರೆ.
ಇವರು ಪ್ರಸ್ತುತ ಶ್ರೀನಿವಾಸ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಮಂಗಳೂರಿನ ಜಾನೆಟ್ ಮತ್ತು ರೆಜಿನಾಲ್ಡ್ ಡಿಸಿಲ್ವಾ ದಂಪತಿಯ ಪುತ್ರಿಯಾಗಿದ್ದಾರೆ.