ಕಾಸರಗೋಡು,ಜ.26(DaijiworldNews/TA): ಗಣರಾಜ್ಯೋತ್ಸವ ದಿನದ ಅಂಗವಾಗಿ ವಿದ್ಯಾನಗರ ದಲ್ಲಿರುವ ನಗರಸಭಾ ಸ್ಟೇಡಿಯಂನಲ್ಲಿ ನಡೆದ ಧ್ವಜಾರೋಹಣ ಹಾಗೂ ಧ್ವಜ ವಂದನೆಯನ್ನು ಕೇರಳ ರಾಜ್ಯ ಸಾರಿಗೆ ಸಚಿವ ಕೆ. ಬಿ ಗಣೇಶ್ ಕುಮಾರ್ ಸ್ವೀಕರಿಸಿದರು.
ಬಳಿಕ ಆಕರ್ಷಕ ಪಥಸಂಚಲನ ನಡೆಯಿತು. ಜಿಲ್ಲಾಧಿಕಾರಿ ಕೆ. ಇಂಪಾಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್. ಎ ನೆಲ್ಲಿಕುನ್ನು, ಸಿ. ಎಚ್ ಕುಞಿಂಬು, ಎ.ಕೆ.ಎಂ ಅಶ್ರಫ್, ಎಂ.ರಾಜ್ ಗೋಪಾಲ್ ಮೊದಲಾದವರು ಉಪಸ್ಥಿತರಿದ್ದರು.