ಕಾಸರಗೋಡು, ಡಿ 04 : ಕಾರು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಬೆದರಿಸಿ ದರೋಡೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯೋರ್ವನನ್ನು ಡಿ 4 ರಂದು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.ಆರೋಪಿಯನ್ನು ಉಳಿಯತ್ತಡ್ಕ ಬಿಲಾಲ್ ನಗರದ ಇ. ಕೆ ಅಬ್ದುಲ್ಲಾ ಸಮದಾನಿ ( 24) ಎಂದು ಗುರುತಿಸಲಾಗಿದೆ. ಪಯ್ಯನ್ನೂರಿನ ಧಾರ್ಮಿಕ ಕೇಂದ್ರವೊಂದಕ್ಕೆ ತೆರಳುತ್ತಿದ್ದಾಗ ಡಿ 3 ರಂದು ರಾಷ್ಟ್ರೀಯ ಹೆದ್ದಾರಿಯ ನಾಯಮ್ಮರಮೂಲೆ ಎಂಬಲ್ಲಿ ಸಾಲೆತ್ತೂರಿನ ಮುಹಮ್ಮದ್ ಹಾರಿಸ್ ಮತ್ತು ಸ್ನೇಹಿತ ಫಾರೂಕ್ ಅವರು ಪ್ರಯಾಣಿಸುತ್ತಿದ್ದ ಕಾರನ್ನು ತಡೆದ ನಾಲ್ವರ ತಂಡವು ಬೆದರಿಸಿ ದರೋಡೆ ಮಾಡಿತ್ತು. ಬಂಧಿತ ಅಬ್ದುಲ್ ಸಮದಾನಿ ಉಳಿಯತ್ತಡ್ಕದಲ್ಲಿ ಪೆಟ್ರೋಲ್ ಬಂಕ್ ನಲ್ಲಿ ನಡೆದ ಹೊಡೆದಾಟ, ಜೈಲಿನಲ್ಲಿದ್ದಾಗಲ್ಲಿ ಗಲಾಟೆ ನಡೆಸಿದ ಪ್ರಕರಣ ಹಾಗೂ ಇದಲ್ಲದೆ ಈತ ಹಲವು ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ಮೂವರ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.