ಉಡುಪಿ, ಫೆ.26(DaijiworldNews/TA): ನಗರದ ನೆಲ್ಲಿಕಟ್ಟೆಯಲ್ಲಿರುವ ಬಬ್ಬುಸ್ವಾಮಿ ದೇವಸ್ಥಾನದ ಬಳಿ ಇತ್ತೀಚೆಗೆ ಟ್ಯಾಬ್ಲೋದಲ್ಲಿ ದೈವ ವೇಷ ಧರಿಸಿದ ವಿಚಾರದ ಬಗ್ಗೆ ಆಕ್ರೋಶ ವ್ಯಕ್ತವಾಗಿ ವೇಷಧಾರಿಗಳು ದೈವಾರಾಧಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ನೆಲ್ಲಿಕಟ್ಟೆಯಲ್ಲಿರುವ ಬಬ್ಬುಸ್ವಾಮಿ ಹಾಗೂ ಪರಿವಾರ ದೈವ ಸಾನಿಧ್ಯದಲ್ಲಿ ದೈವ ವೇಷ ಧರಿಸಿದ್ದ ನಿತೀನ್ ಪೂಜಾರಿ ಕ್ಷಮೆಯಾಚಿಸಿದ್ದಾರೆ.


ಕೊರಗಜ್ಜ ಹಾಗೂ ಇತರೆ ದೈವ ವೇಷ ಧರಿಸಿ ಬಬ್ಬುಸ್ವಾಮಿ ದೇವಸ್ಥಾನದ ಬಳಿ ಟ್ಯಾಬ್ಲೋ ಸಂಚರಿಸತೊಡಗಿದ್ದಾಗ ದೈವ ವೇಷದಾರಿಗಳಿದ್ದ ಟ್ಯಾಬ್ಲೋವನ್ನು ದೈವರಾಧಕರು ತಡೆದಿದ್ದರು.
ತದನಂತರ ಸಾಮಾಜಿಕ ಜಾಲತಾಣದಲ್ಲಿಯೂ ಈ ವಿಚಾರ ಅನೇಕ ಆಸ್ತಿಕರ ವಿರೋಧಕ್ಕೆ ಕಾರಣವಾಗಿತ್ತು. ಈ ಕಾರಣದಿಂದ ಸಾನಿಧ್ಯದಲ್ಲಿ ಅಖಿಲ ಭಾರತ ದೈವಾರಾಧಕರ ಒಕ್ಕೂಟ ಹಾಗೂ ಪಾಣಾರ ಯಾನೆ ನಲಿಕೆ ಸಂಘದ ಸದಸ್ಯರ ಸಮ್ಮುಖದಲ್ಲಿ ವೇಷಧಾರಿ ನಿತೀನ್ ಪೂಜಾರಿಕ್ಷಮೆಯಾಚಿಸಿ ತಪ್ಪು ಕಾಣಿಕೆ ಹಾಕಿದ್ದಾರೆ.