Karavali
ಮಂಗಳೂರು: ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ರಜತ ಮಹೋತ್ಸವ, ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಏಕಾಹ ಭಜನೋತ್ಸವ
- Wed, Feb 26 2025 06:02:16 PM
-
ಮಂಗಳೂರು, ಫೆ.26(DaijiworldNews/AK):ಶಕ್ತಿನಗರದ ಶ್ರೀ ಕೃಷ್ಣ ಭಜನಾ ಮಂದಿರದ ರಜತ ಮಹೋತ್ಸವದ ಹೊಸ್ತಿಲಲ್ಲಿ ದೇವರ ಪುನಃ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಹಾಗೂ ಏಕಾಹ ಭಜನೋತ್ಸವವು ಮಾರ್ಚ್ 1 ರಿಂದ 4 ರವರೆಗೆ ನಡೆಯಲಿದೆ.
ಮಾರ್ಚ್ 2 ರಂದು ಬೆಳಗ್ಗೆ 11:25ಕ್ಕೆ ಶ್ರೀ ಕೃಷ್ಣ ದೇವರ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಮತ್ತು ಮಾರ್ಚ್ 3 ರಂದು ಸೂರ್ಯೋದಯ 6.45ಕ್ಕೆ ದೀಪ ಪ್ರಜ್ವಲನೆಗೊಳಿಸಿ ಆಹೋರಾತ್ರಿ ಹರಿನಾಮ ಸಂಕೀರ್ತನೆಯೊಂದಿಗೆ ಏಕಾಹ ಭಜನೋತ್ಸವ ನೆರವೇರಲಿದೆ.
ಮಾ. 1 ರಂದು ಸಂಜೆ 3ಕ್ಕೆ ಹೊರೆಕಾಣಿಕೆ ಮೆರವಣಿಗೆಯು ಶ್ರೀ ಮುತ್ತಪ್ಪ ಗುಡಿ ವಠಾರದಿಂದ ಹೊರಟು ಶ್ರೀ ಕೃಷ್ಣ ಭಜನಾ ಮಂದಿರದವರೆಗೆ ನೂತನ ಸ್ವರ್ಣ ಕಿರೀಟ ಹಾಗೂ ಪ್ರಭಾವಳಿಯೊಂದಿಗೆ ಸಾಗಿ ಬರಲಿದೆ. ನಂತರ ನೂತನ ಗರ್ಭಗೃಹದ ಗೇಹ ಪ್ರತಿಗ್ರಹಣ(ವಿಶ್ವಕರ್ಮ ಪೂಜೆ), ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಸಪ್ತ ಶುದ್ದಿ, ಪ್ರಾಸಾದ ಶುದ್ಧಿ, ಗೋಪೂಜೆ, ಗೋಪ್ರವೇಶ, ತುಳಸಿ ಪೂಜೆ, ವಾಸ್ತು ಪೂಜೆ, ವಾಸ್ತು ಹೋಮ, ರಕ್ಷೋಘ್ನ ಹೋಮ, ಸುದರ್ಶನ ಹೋಮ, ದಿಕ್ಷಾಲಕ ಬಲಿ, ಸೂತ್ರ ಬಂಧನ, ಬಿಂಬ ಶುದ್ದಿ, ಬಿಂಬ ಅಧಿವಾಸ, ಬ್ರಹ್ಮಕಲಶ ಮಂಡಲ ಪೂಜೆ, ಕಲಶಾಧಿವಾಸ ನಡೆಯಲಿದೆ.
ಮಾ. 2 ರಂದು ಬೆಳಗ್ಗೆ ಗಣಪತಿ 12 ತೆಂಗಿನಕಾಯಿ ಹೋಮ, ವಿಷ್ಣು ಸಹಸ್ರನಾಮ ಹೋಮ ನಡೆಯಲಿದೆ 11:25ಕ್ಕೆ ವೃಷಭ ಲಗ್ನದಲ್ಲಿ ಪುನಃ ಪ್ರತಿಷ್ಠೆ ಜರುಗಲಿದೆ. ನಂತರ ಅಷ್ಟಬಂಧ ಲೇಪನ, ಬ್ರಹ್ಮಕಲಶಾಭಿಷೇಕ, ಪ್ರಸನ್ನ ಪೂಜೆ ನಡೆಯಲಿದೆ. ಶ್ಯಾಮಸುಂದರ ಸಭಾಭವನವನ್ನು ಯೆಯ್ಯಾಡಿ ಶ್ರೀ ಜಯರಾಮ ಭಜನಾ ಮಂದಿರದ ಗೌರವಾಧ್ಯಕ್ಷ ಧೂಮಪ್ಪ ಮೇಸ್ತ್ರಿ ಉದ್ಘಾಟಿಸಲಿದ್ದಾರೆ. ನಂತರ ಭೋಜನಶಾಲೆಯಲ್ಲಿ ಹಾಲು ಉಕ್ಕಿಸಲಾಗುವುದು. ಬಳಿಕ ಶ್ರೀ ಕೃಷ್ಣ ದೇವರ ಮಹಾಪೂಜೆ, ಪಲ್ಲ ಪೂಜೆಯಾಗಿ, ಮಹಾ ಅನ್ನಸಂತರ್ಪಣೆ ಜರುಗಲಿದೆ. ಮಧ್ಯಾಹ್ನ 1 ರಿಂದ 3 ರವರೆಗೆ ಅರ್ಚನಾ ಮುರಳೀಕೃಷ್ಣ ರವರಿಂದ ಭಕ್ತಿಗೀತೆ, ಮಧ್ಯಾಹ್ನ 3 ರಿಂದ 5 ರವರೆಗೆ ಪ್ರಕಾಶ್ ಗಟ್ಟಿ ಬಳಗದಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಸುಂದರ ಅಂಚನ್ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಕೃಷ್ಣ ಭಜನಾ ಮಂದಿರ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಅವಿನಾಶ್ ಅಂಚನ್ ಗೌರವ ಉಪಸ್ಥಿತಿಯಲ್ಲಿ, ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ಶಾಸಕ ಡಿ. ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮನಪಾ ಸದಸ್ಯೆಯರಾದ ವನಿತಾ ಪ್ರಸಾದ್ ಮತ್ತು ಶಕೀಲ ಕಾವ, ಶಕ್ತಿನಗರ ಶ್ರೀ ವೈದ್ಯನಾಥ ಕ್ಷೇತ್ರದ ಮೋಕ್ತೇಸರರಾದ ಸೀತಾರಾಮ್ ಶೆಟ್ಟಿ ಹಾಗೂ ಗಣೇಶ್ ಕುಂಟಲ್ಪಾಡಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ್, ಯೆಯ್ಯಾಡಿ ಮೇಸ್ತ್ರಿ ಕನ್ಸ್ಟ್ರಕ್ಷನ್ಸ್ ನ ಪ್ರವೀಣ್ ದಂಡಕೇರಿ, ಹುಬ್ಬಳ್ಳಿ ಅನನ್ಯ ಫೀಡ್ಸ್ ನ ದಿವಾಣ ಗೋವಿಂದ ಭಟ್, ಪದವು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕುಶಾಲ್ ಕುಮಾರ್ .ಕೆ, ಪೂರ್ಣಾನಂದ ಸೇವಾ ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ರಮೇಶ್ ನಾಯಕ್ ಹಾಗೂ ಮತ್ತಿತರ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸ್ಥಳ ದಾನ ಮಾಡಿದ ದಿ. ತಿಮ್ಮ ಪೈಯವರ ಮಕ್ಕಳಾದ ಪ್ರೇಮಾನಂದ ಪೈ, ಗೀತಾ ಪ್ರೇಮ್ ಕುಮಾರ್, ಲತಾ ವಿ. ಪೈ, ಸೀತಾ ಆರ್. ಶಾನುಭೋಗ್ ರವರಿಗೆ ಉಪಕಾರ ಸ್ಮರಣೆ ಮಾಡಲಾಗುವುದು. ನಂತರ ಶ್ರೀ ಕೃಷ್ಣ ಭಜನಾ ಮಂದಿರ ಸಭಾಭವನದ ದಾನಿ ಸುಂದರ ಅಂಚನ್, ಭಜನಾ ಗುರು ಹಾಗೂ ಹಿರಿಯ ಸಿತಾರ್ ಕಲಾವಿದ ಕೊರಗಪ್ಪ ಎ. ಕೋಟ್ಯಾನ್, ಅರ್ಚಕರಾಗಿ ನಿರಂತರ ಸೇವೆ ನೀಡುತ್ತಿರುವ ಸುಬ್ರಮಣ್ಯ ಹೊಳ್ಳ, ಹಿರಿಯ ಭಜಕರು ಹಾಗೂ ಮಂದಿರದಲ್ಲಿ ನಿರಂತರ ಸೇವೆ ನೀಡುವ ನಾರಾಯಣ ಶೆಟ್ಟಿ, ಶಶಿಧರ್ ಮತ್ತು ದಯಾನಂದ ಕಾರ್ಪೆಂಟರ್, ಕಾರ್ಯದರ್ಶಿಯಾಗಿ ನಿರಂತರ ಸೇವೆ ನೀಡುತ್ತಿರುವ ಯು. ಶಿವಪ್ಪ, ಶ್ರೀ ಕೃಷ್ಣ ಭಜನಾ ಮಂದಿರದ ಉಪಾಧ್ಯಕ್ಷ ಹಾಗೂ ಹಿರಿಯ ಸೇವಕ ಬಾಲಕೃಷ್ಣ ಪ್ರಭು, ಸ್ಥಾಪಕಾಧ್ಯಕ್ಷ ಕೇಶವ .ಎಸ್ ರವರನ್ನು ಸನ್ಮಾನಿಸಲಾಗುವುದು.
ದಯಾನಂದ ಕೋಟ್ಯಾನ್, ಪರಮೇಶ್ವರ ಶೆಟ್ಟಿಗಾರ್, ರಮಾದೇವಿ, ಗಿರಿಜಾ ಬಾಬು ನಾಯ್ಕ, ರಾಜೀವಿ ಜನಾರ್ಧನ, ಮಾಲತಿ ದಿನೇಶ್, ವಿಶ್ವ ಹಿಂದೂ ಪರಿಷತ್ ಭಜರಂಗದಳ- ವೈದ್ಯನಾಥ ಶಾಖೆಯನ್ನು ಗೌರವಿಸಲಾಗುವುದು. ದಿ. ಶ್ರೀ ಜನಾರ್ದನ ಜೋಗಿ, ದಿ. ಪುರುಷೋತ್ತಮ .ಕೆ, ದಿ. ಸುಂದರ ಜೋಗಿ, ದಿ. ನಾರಾಯಣ ಶೆಟ್ಟಿ ಮತ್ತು ದಿ. ಮಾಧವ ಕೆ. ಪೂಜಾರಿ ಯವರ ಮನೆಯವರಿಗೆ ಮರಣೋತ್ತರ ಗೌರವ ನೀಡಲಾಗುವುದು. ರಾತ್ರಿ 9 ರಿಂದ ಶ್ರೀ ವಿಜಿತ್ ಶೆಟ್ಟಿ ಆಕಾಶಭವನ ರವರ ಶಿಷ್ಯವೃಂದ ಶ್ರೀ ಕೃಷ್ಣ ಯಕ್ಷ ಬಳಗ ವಿದ್ಯಾರ್ಥಿಗಳಿಂದ ’ಶ್ರೀ ಏಕಾದಶಿ ದೇವಿ ಮಹಾತ್ಮೆ’ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ.
ಮಾ. 3 ರಂದು ಸೂರ್ಯೋದಯದಿಂದ ಮಾ.೪ ಸೂರ್ಯೋದಯದವರೆಗೆ ಆಹೋರಾತ್ರಿ ಹರಿನಾಮ ಸಂಕೀರ್ತನೆಯೊಂದಿಗೆ ಏಕಾಹ ಭಜನೋತ್ಸವ ನಡೆಯಲಿದೆ. ಸುಮಾರು ೨೫ ಕ್ಕೂ ಹೆಚ್ಚು ಭಜನಾ ತಂಡಗಳು ಪಾಲ್ಗೊಳ್ಳಲಿವೆ. ಬೆಳಗ್ಗೆ 8 ರಿಂದ ಪ್ರತೀ ಎರಡು ಗಂಟೆಗೊಮ್ಮೆ ಜಾಮ ಪೂಜೆ ಜರುಗಲಿದೆ. ಮಧ್ಯಾಹ್ನ ಪಲ್ಲ ಪೂಜೆಯಾಗಿ, ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಮಾ. 4 ರಂದು ಬೆಳಗ್ಗೆ 10 ರಿಂದ 12 ರವರೆಗೆ ಸ್ಥಳೀಯ ಪ್ರತಿಭೆಗಳಿಂದ ಕರೋಕೆ ಭಕ್ತಿ ಸಂಗೀತ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಶ್ರೀ ಕೃಷ್ಣ ದೇವರ ಮಹಾಪೂಜೆ, ಪಲ್ಲ ಪೂಜೆ ನಡೆದು, ಮಹಾ ಅನ್ನಸಂತರ್ಪಣೆ ಜರುಗಲಿದೆ. ಮದ್ಯಾಹ್ನ 12 ರಿಂದ 2 ರವರೆಗೆ ಅಡ್ಯಾರ್ ಪದವಿನ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ, 2 ರಿಂದ 4 ರವರೆಗೆ ಪೊಳಲಿ ಮಣಿಕಂಠಪುರದ ಶ್ರೀ ಮಣಿಕಂಠ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಸಂಜೆ 4 ರಿಂದ 6 ರವರೆಗೆ ನಾದಸಂಕೀರ್ತನ ತಂಡದಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆದು, ಸಂಜೆ 6 ಕ್ಕೆ ಆನಂದ ಪೂಜೆ ಜರುಗಲಿದೆ. ರಾತ್ರಿ 8 ರಿಂದ ಶ್ರೀ ವಿಜಿತ್ ಶೆಟ್ಟಿ ಆಕಾಶಭವನ ರವರ ಶಿಷ್ಯವೃಂದ ಶ್ರೀ ಕೃಷ್ಣ ಯಕ್ಷಬಳಗದ ಮಹಿಳಾ ಸದಸ್ಯೆಯರಿಂದ ’ಶ್ರೀ ಕೃಷ್ಣ ಲೀಲಾಮೃತ’ ತಾಳಮದ್ದಳೆ ಕಾರ್ಯಕ್ರಮ ಜರುಗಲಿದೆ.
ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ, ರಜತ ಮಹೋತ್ಸವ ಸಮಿತಿ ಮತ್ತು ಟ್ರಸ್ಟಿ, ಶ್ರೀ ಕೃಷ್ಣ ಭಜನಾ ಮಂದಿರದ ಸಂಚಾಲಕ ಹರೀಶ್ ಕುಮಾರ್ ಜೋಗಿ, ರಜತ ಮಹೋತ್ಸವ ಸಮಿತಿ ಉಪಾಧ್ಯಕ್ಷ ಕೇಶವ, ರಜತ ಮಹೋತ್ಸವ ಸಮಿತಿ ಮತ್ತು ಟ್ರಸ್ಟಿ, ಶ್ರೀ ಕೃಷ್ಣ ಭಜನಾ ಮಂದಿರ ಸಾಂಸ್ಕೃತಿಕ ಸಂಚಾಲಕ ಪ್ರಸಾದ್ ಕುಂದರ್, ಪ್ರಚಾರ ಸಂಚಾಲಕ ಎಸ್ ರವಿಚಂದ್ರ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.