ಮಂಗಳೂರು, ಫೆ.28 (DaijiworldNews/AA): ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡು ಬ್ಯಾಂಕ್ ದಾಖಲೆಗಳು ಸುಟ್ಟು ಕರಕಲಾದ ಘಟನೆ ಕರಂಗಲ್ಪಾಡಿ ವಾಣಿಜ್ಯ ಸಂಕೀರ್ಣದಲ್ಲಿರುವ ಬ್ಯಾಂಕಿನಲ್ಲಿ ಇಂದು ನಡೆದಿದೆ.



ಕಟ್ಟಡದಿಂದ ದಟ್ಟವಾದ ಹೊಗೆ ಹೊರಬರುತ್ತಿರುವುದನ್ನು ಕಂಡು ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಮತ್ತಷ್ಟು ಹರಡುವ ಮುನ್ನವೇ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿಗಳ ಪ್ರಕಾರ ಬೆಂಕಿಯಲ್ಲಿ ಹಲವಾರು ಪ್ರಮುಖ ಬ್ಯಾಂಕ್ ದಾಖಲೆಗಳು ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಮಧ್ಯಾಹ್ನದ ಸಮಯವಾಗಿದ್ದರಿಂದ ಬ್ಯಾಂಕಿನೊಳಗೆ ಕಡಿಮೆ ಗ್ರಾಹಕರಿದ್ದರು ಎನ್ನಲಾಗಿದೆ.
ದಟ್ಟವಾದ ಹೊಗೆ ಕಾಣಿಸಿಕೊಂಡ ತಕ್ಷಣ, ಉದ್ಯೋಗಿಗಳು ತಕ್ಷಣ ಕಟ್ಟಡದಿಂದ ಹೊರಬಂದರು. ಇದರಿಂದ ಯಾವುದೇ ಸಾವುನೋವುಗಳು ಸಂಭವಿಸಿಲ್ಲ.