ಬಂಟ್ವಾಳ, ಮಾ.03 (DaijiworldNews/AA): ಭಾರತದ ಸ್ವಾಭಿಮಾನವನ್ನು ಬಡಿದ್ದೆಬ್ಬಿಸಿದ ಸಿಡಿಲ ಸಂತ ಸ್ವಾಮಿ ವಿವೇಕಾನಂದರು ಹಾಗೂ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಮುನ್ನುಡಿಯನ್ನು ಬರೆದ, ನೇತಾಜಿ ಸುಭಾಷ್ ಚಂದ್ರ ಬೋಸ್ ರಂತಹ ಮಹಾನ್ ವ್ಯಕ್ತಿಗಳು ಪ್ರಸ್ತುತ ಕಾಲಘಟ್ಟದಲ್ಲು ಭಾರತದ ಯುವ ಪೀಳಿಗೆಗೆ ಪ್ರೇರಣೆ ಮತ್ತು ಸ್ಪೂರ್ತಿಯಾಗಿದ್ದಾರೆ ಎಂದು ಹಿ.ಜಾ.ವೇ.ಯ ಕ್ಷೇತ್ರೀಯ ಸಂಯೋಜಕರಾದ ಜಗದೀಶ್ ಕಾರಂತ್ ಹೇಳಿದ್ದಾರೆ.




ಭಾನುವಾರ ಸಂಜೆ ಬಿ.ಸಿ.ರೋಡಿನ ಶ್ರೀರಕೇಶ್ವರೀ ದೇವಸ್ಥಾನದ ಮುಂಭಾಗದಲ್ಲಿ ಹಿಂದೂ ಜಾಗರಣ ವೇದಿಕೆಬಂಟ್ವಾಳ ತಾಲೂಕು,ಮಂಗಳೂರು ಗ್ರಾಮಾಂತರ ಜಿಲ್ಲೆಯ ಆಶ್ರಯದಲ್ಲಿ ಸ್ವಾಮೀ ವಿವೇಕಾನಂದ ಮತ್ತು ನೇತಾಜಿ ಸುಭಾಷ್ ಚಂದ್ರಬೋಸ್ ಅವರುಗಳ ಜನ್ಮ ಜಯಂತಿಯ ಪ್ರಯುಕ್ತ ನಡೆದ "ಹಿಂದೂ ಯುವ ಸಮಾವೇಶ"ದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಸ್ವಾಮಿವಿವೇಕಾನಂದರು ಅಪ್ಪಟ ರಾಷ್ಟ್ರಭಕ್ತರಾಗಿದ್ದರು. ದೈರ್ಯ, ಸಾಹಸ, ಪರಾಕ್ರಮ ಎಲ್ಲಾ ಸದ್ಗುಣಗಳ ಸಮುಚ್ಚಯವನ್ನು ಮೈಗೂಡಿಸಿರುವ ಕ್ರಾಂತಿಕಾರಿ ಸುಭಾಶ್ಚಂದ್ರ ಭೋಸ್ ಅವರು ಬ್ರಿಟಿಷರ ವಿರುದ್ದ ಸೇಡು ತೀರಿಸಲು ಸನ್ನದ್ದರಾಗಿದ್ದರು. ಆದರೆ ಅಹಿಂಸಾ ತತ್ವದಡಿಯಲ್ಲಿ ಮಹಾತ್ಮಗಾಂಧಿ ಮತ್ತವರ ಟೀಂ ಅಸಹಕಾರ ನೀಡಿದ್ದರಿಂದ ಇದು ಸಾಧ್ಯವಾಗಿಲ್ಲ ಸುಭಾಶ್ಚಂದ್ರರವರು ಇನ್ನೆರಡು ವರ್ಷ ಬದುಕುಳಿದಿದ್ದರೆ ದೇಶ ವಿಭಜನೆಯಾಗುತ್ತಿರಲಿಲ್ಲ, ಅಂದಿನ ನಮ್ಮ ನಾಯಕತ್ವದ ದೌರ್ಬಲ್ಯದಿಂದಾಗಿ ದೇಶ ವಿಭಜನೆಯಾಗುವಂತಾಯಿತು ಎಂದು ವಿಶ್ಲೇಷಿಸಿದರು.
ಸನಾತನ ಧರ್ಮನಾಶ ಮಾಡುವ ಕೂಗು,ಅಂದೋಲನಗಳು ಅಲ್ಲಲ್ಲಿ ನಡೆಯುತ್ತಿದ್ದು, ಮುಂದಿನ ದಿನದಲ್ಲಿ ಭಾರತಕ್ಕೆ ಭವಿಷ್ಯವಿಲ್ಲ, ಹಿಂದೂ ಸಮಾಜ ಸಮಾಧಿಯಾಯಿತು ಎಂಬ ಮಾತುಗಳು ಕೇಳಿ ಬರತೊಡಗಿತ್ತು. ಆದರೆ ಇದಕ್ಕೆಲ್ಲದಕ್ಕು ಪ್ರಯಾಗ್ ರಾಜ್ ನಲ್ಲಿ ಅಭೂತಪೂರ್ವವಾಗಿ ಸಂಪನ್ನಗೊಂಡ ಕುಂಭಮೇಳ ಹಿಂದುತ್ವದ ಪುನರುತ್ಥಾನಕ್ಕೆ ಸಾಕ್ಷಿಯಾಗಿದೆ. ಸನಾತನ ಹಿಂದೂ ದರ್ಮವನ್ನು ನಾಶ ಮಾಡಲು ಹೊರಟವರಿಗೂ ತಕ್ಕ ಉತ್ತರವು ಸಿಕ್ಕಿದೆ ಎಂದ ಕಾರಂತ್ ಅವರು ಹಿಂದುತ್ವವೇ ಭಾರತದ ಆತ್ಮ, ಉಸಿರಾಗಿದೆ ಎಂದು ಬಣ್ಣಿಸಿದರು.
2047 ಇಸ್ಲಾಮೀಕರಣ ರಾಷ್ಟ್ರಕ್ಕಾಗಿ ರಿಹರ್ಸಲ್:
ನಿಷೇಧಿತ ಪಿಎಫ್ ಐ ವಿರುದ್ದ ಎನ್ಐಎ ಸಲ್ಲಿರುವ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣ ಪಟ್ಟಿಯಲ್ಲಿ 2047ಕ್ಕೆ ಭಾರತವನ್ನು ಇಸ್ಲಾಮೀಕರಣ ರಾಷ್ಟ್ರವನ್ನಾಗಿಸಲಾಗುತ್ತದೆ ಎಂಬ ಸ್ಪೋಟಕ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ಇದಕ್ಕಾಗಿ ಈಗಾಗಲೇ ಪುಂಡರು ರಿಹರ್ಸಲ್ ನ್ನು ಆರಂಭಿಸಿದ್ದಾರೆ ಎಂದು ಜಗದೀಶ್ ಕಾರಂತ್ ತಿಳಿಸಿದರು.
ಇನ್ನು 23 ವರ್ಷಗಳಿದ್ದರೂ ಈಗಾಗಲೇ ಇಸ್ಲಾಮೀಕರಣಕ್ಕೆ ಕರೆಯು ಬಂದಿರುವ ಹಿನ್ನಲೆಯಲ್ಲಿ ಲ್ಯಾಂಡ್ ಜಿಹಾದ್, ಆರ್ಥಿಕ ಜೀಹಾದ್, ಪಾಪ್ಯಲೇಶನ್, ಅಂಡರ್ ವರ್ಲ್ಡ್ ಇಸ್ಲಾಮಿಕರಣದ ಯೋಜನೆಯ ಯುದ್ಧದ ಆರಂಭಿಕ ಸಂಕೇತವಾಗಿದೆ ಎಂದ ಅವರು ಡಿಜೆಹಳ್ಳಿ, ಕೆಜೆಹಳ್ಳಿ, ಹುಬ್ಬಳ್ಳಿ ಗಲಭೆ ಉದಯಗಿರಿ ಪೊಲೀಸರು, ಠಾಣೆಯ ಮೇಲಿನ ದಾಳಿ ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಇಂತಹ ಪುಂಡರನ್ನು ಅಧಿಕಾರದಲ್ಲಿರುವ ಮಂತ್ರಿಗಳು ಸಮರ್ಥನೆಗಿಳಿದಿರುವುದು ಮತ್ತು ವಾದಿಸುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಸಕ್ತ ದಿನಗಳಲ್ಲಿ ಹಿಂದೂ ಸಮಾಜ ಜಾಗೃತ, ಸಂಘಟಿತನಾಗಿದ್ದಾನೆ ಎಂಬುದು ಸತ್ಯವಾಗಿದ್ದು, ಇದಕ್ಕೆ ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನ ಸಭೆಯ ಚುನಾವಣೆಯ ಫಲಿತಾಂಶ ತೋರಿಸಿಕೊಟ್ಟಿದೆ ಎಂದು ಹೇಳಿದರು.
ವಿಶ್ವಗುರುವನ್ನಾಗಿಸಲು ಪಣತೊಡಿ:
ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಅವರು ಆರ್ಶೀವಚನಗೈದು, ನಮ್ಮಳೊಗಿರುವ ಭಿನ್ನಭಿಪ್ರಾಯವನ್ನು ಮರೆತು ಇಡೀ ಹಿಂದೂ ಸಮಾಜ ಸಂಘಟಿತರಾಗಬೇಕು ಆಮೂಲಕ ಭಾರತದೇಶವನ್ನು ವಿಶ್ವಗುರುವನ್ನಾಗಿಸುವ ನಿಟ್ಟಿನಲ್ಲಿ ಪಣತೊಡಬೇಕು ಎಂದರು.
ಸನಾತನ ಹಿಂದೂ ಧರ್ಮಕ್ಕೆ ಆದಿಯು ಇಲ್ಲ, ಅಂತ್ಯವು ಇಲ್ಲ, ಹಿಂದೂ ಸಮಾಜ ಬಲಿಷ್ಠವಾದರೆ ಯಾರು ನಮ್ಮ ತಂಟೆಗೂ ಬರುವುದಿಲ್ಲ ಎಲ್ಲ ವರ್ಗದ ಜನರನ್ನು ಸ್ವೀಕರಿಸುವುದು ಹಿಂದು ಧರ್ಮದ ದೊಡ್ಡತನವಾಗಿದೆ. ಕಪ್ಟದಲ್ಲಿರುವವರಿಗೆ ಸ್ಪಂದಿಸುವ ಕಾರ್ಯಾವಾಗಬೇಕು ಎಂದು ತಿಳಿಸಿದರು.
ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ, ಪ್ರಾಂತ ಕಾರ್ಯಕಾರಿಣಿ ಸದಸ್ಯ ಪ್ರಶಾಂತ್ ಕೆಂಪುಗುಡ್ಡೆ, ಯುವ ಅಯಾಮ ಪ್ರಮುಖ್ ಪುಪ್ಪರಾಜ್ ಕಮ್ಮಾಜೆ, ನ್ಯಾಯ ಜಾಗರಣ್ ಪ್ರಮುಖ್ ನ್ಯಾಯವಾದಿ ರಾಜೇಶ್ ಬೊಳ್ಳುಕಲ್ಲು ವೇದಿಕೆಯಲ್ಲಿದ್ದರು.
ಹಿ.ಜಾ.ವೇ.ಬಂಟ್ವಾಳ ತಾಲೂಕು ಸಂಯೋಜಕ ಚಿದಾನಂದ ಕುಜಿಲಬೆಟ್ಟು ಸ್ವಾಗತಿಸಿದರು. ಕಿರಣ್ ವಂದಿಸಿದರು. ಸುರೇಶ್ ಎಸ್ ನಾವೂರು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಕಿಶೋರ್ ಪಲ್ಲಿಪಾಡಿ ವಂದೇ ಮಾತರಂ ಗೀತೆ ಹಾಡಿದರು.
ಸಮಾವೇಶಕ್ಕೆ ಮುನ್ನ ಬಿ.ಸಿ.ರೋಡ್ ಕೈಕಂಬ ಪೊಳಲಿ ದ್ವಾರದಿಂದ ಶ್ರೀರಕೇಶ್ವರೀ ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆಯಿತು. ಕುಣಿತ ಭಜನೆ ಮೆರವಣಿಗೆಗೆ ವಿಶೇಷ ಮೆರಗು ನೀಡಿತು. ಮೆರವಣಿಗೆಯ ಕೊನೆಗೆ ಜಗದೀಶ್ ಕಾರಂತ್ ಅವರು ಮಕ್ಕಳ ಕುಣಿತ ಭಜನೆಯನ್ನು ಕಣ್ತುಂಬಿಕೊಂಡರು.
ದಿಗಂತ್ ಪತ್ತೆಗೆ ಆಗ್ರಹ:
ಫರಂಗೀಪೇಟೆ ನಿವಾಸಿ, ವಿದ್ಯಾರ್ಥಿ ದಿಗಂತ್ ಎನ್ನುವ ಬಾಲಕ ನಾಪತ್ತೆಯಾಗಿ ಐದು ದಿನಕಳೆದರೂ ಪತ್ತೆಹಚ್ಚಲು ಸಾಧ್ಯವಾಗದಿರುವುದು ಪೊಲೀಸ್ ಇಲಾಖೆಯ ಕಾರ್ಯವೈಖರಿಗೆ ಕಳಂಕವಾಗಿದೆ ಎಂದು ಹಿ.ಜಾ.ವೇ.ಕ್ಷೇತ್ರೀಯ ಸಂಯೋಜಕರಾದ ಜಗದೀಶ್ ಕಾರಂತ್ ಹೇಳಿದರು.
ಫರಂಗಿಪೇಟೆ ಅನ್ನುವುದು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ ಇಲ್ಲಿ ಗಾಂಜಾ ಮಾಫಿಯಾ ಬೇರೂರಿದೆ ಎಂಬ ದೂರುಗಳಿವೆ, ಈ ದಂಧೆಕೋರರನ್ನು ಬಂಧಿಸಿ ವಿಚಾರಣೆಗೊಳಪಡಿಸಿದರೆ ಎಲ್ಲವು ಬಯಲಿಗೆ ಬರುವ ಸಾಧ್ಯತೆ ಇದೆ.ಇದರ ಹಿಂದೆ ಪ್ರಬಲವಾದ ಕೈವಾಡವಿರುವ ಶಂಕೆ ಇದ್ದು, ಪ್ರಕರಣವನ್ನು ಮುಚ್ಚಿ ಹಾಕಿ ನಾಪತ್ತೆಗೆ ಕಾರಣವಾದರನ್ನು ರಕ್ಷಿಸುವುದಕ್ಕೆ ಪ್ರಯತ್ನಿಸಿದರೆ ಜಿಲ್ಲೆಯಲ್ಲಿ ತೀವ್ರ ಹೋರಾಟ ಅನೀವಾರ್ಯವಾದೀತು. ಹಾಗಾಗಿ ಈ ಪ್ರಕರಣವನ್ನು ನಿರ್ಲಕ್ಷಿಸದೆ ಬಾಲಕ ದಿಗಂತನನ್ನು ಪತ್ತೆಹಚ್ಚಿ ಇಲಾಖೆಯ ಗೌರವ ವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.