ಉಡುಪಿ, ಮಾ.05(DaijiworldNews/TA): ದಕ್ಷಿಣ ಕನ್ನಡ ಜಿಲ್ಲೆಯ ವಿಶೇಷ ಕಲೆ ಯಕ್ಷಗಾನದ ಪ್ರದರ್ಶನಕ್ಕಿರುವ ನಿಯಮಾವಳಿಗಳನ್ನು ಸಡಿಲಗೊಳಿಸುವಂತೆ ಸದನದಲ್ಲಿ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಮನವಿ ಮಾಡಿದ್ದಾರೆ.

ನನ್ನ ಮತ ಕ್ಷೇತ್ರದಲ್ಲಿ ಯಕ್ಷಗಾನವನ್ನು ನಿಲ್ಲಿಸಿ ಎಫ್ ಐ ಆರ್ ಹಾಕಲಾಗಿದೆ, ರಾತ್ರಿ ಧ್ವನಿವರ್ಧಕ ಬಳಸಬಾರದು ಎಂಬ ಕಾರಣ ನೀಡಿ ಯಕ್ಷಗಾನಕ್ಕೆ ತಡೆಯೊಡ್ಡಲಾಗಿದೆ. ರಾತ್ರಿ ಹತ್ತು ಗಂಟೆಯ ಬಳಿಕ ಧ್ವನಿವರ್ಧಕ ಬಳಸಬಾರದು, ಚಲನ್ ಕಟ್ಟದೇ ಇದ್ದಲ್ಲಿ ಯಕ್ಷಗಾನಕ್ಕೆ ಅನುಮತಿ ನೀಡುತ್ತಿಲ್ಲ, ಹಾಗಾಗಿ ನಿಯಮಾವಳಿಗಳನ್ನು ಸಡಿಲಗೊಳಿಸುವಂತೆ ಮನವಿ ಮಾಡಿದ್ದಾರೆ.
ಈ ಸಂದರ್ಭ ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಯಕ್ಷಗಾನ ನಮ್ಮ ದೇಶದ ಆಸ್ತಿ, ಅದರ ಉಳಿವಿಗಾಗಿ ನಮ್ಮ ಬೆಂಬಲವಿದೆ , ಈ ಬಗ್ಗೆ ಚರ್ಚಿಸಲಾಗುವುದು ಎಂಬುದಾಗಿ ಸಕರಾತ್ಮಕ ಸ್ಪಂದನೆಯನ್ನು ನೀಡಿದ್ದಾರೆ.