ಮಂಗಳೂರು, ಮಾ.07 (DaijiworldNews/AK):ಬೋಳೂರಿನಲ್ಲಿ ಕಾರ್ಯಾಚರಿಸುತ್ತಿರುವ ನೈಟ್ ಫೀಸ್ಟ್ ಹೋಟೆಲ್ ಶುಚಿತ್ವ ಇಲ್ಲದೆ ಅಡುಗೆ ತಯಾರಿಸಿ ಗ್ರಾಹಕರಿಗೆ ವಿತರಿಸುತ್ತಿರುವ ಆರೋಪ ಹಿನ್ನಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಧಿಡೀರ್ ಭೇಟಿ ನೀಡಿದ್ದಾರೆ.



ಗ್ರಾಹಕರಿಂದ ಮಂಗಳೂರು ಮಹಾನಗರ ಪಾಲಿಕೆಗೆ ದೂರು ನೀಡಲಾಗಿತ್ತು.ನೈಟ್ ಫೀಸ್ಟ್ ಗೆ ಊಟಕ್ಕೆ ತೆರಳಿದ್ದ ಕೊಡಿಕಲ್ ಅಶೋಕನಗರದ ಸ್ನೇಹಿತರ ತಂಡ ಬೆಕ್ಕು ತಿನ್ನುತ್ತಿದ್ದ ಬಿರಿಯಾನಿ ಗ್ರಾಹಕರಿಗೆ ನೀಡಿ, ಪ್ರಶ್ನಿಸಿದಾಗ ಮಾಲಕನಿಂದ ಉಡಾಫೆ ಉತ್ತರ ಕೊಟ್ಟಿದ್ದಾರೆ . ಇದೇ ಹೋಟೆಲ್ ನಲ್ಲಿ ಹಲ್ಲಿಯ ಬಾಲದ ತುಂಡು ದೊರಕಿದ್ದ ಆರೋಪ ಕೂಡ ಕೇಳಿ ಬಂದಿತ್ತು.
ಈ ಹಿನ್ನಲೆ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ತೆರಳಿ ತಪಾಸಣೆ ನಡೆಸಿದ್ದಾರೆ.
ದಿನದ 24 ಗಂಟೆ ಹೋಟೆಲ್ ತೆರೆಯುವ ಬಗ್ಗೆ ಅನುಮತಿ ಪತ್ರದ ಬಗ್ಗೆ ತನಿಖೆ ನಡೆಸಿ ಅನಧಿಕೃತವಾಗಿ ಊಟದೊಂದಿಗೆ ಬಿಯರ್ ಪೂರೈಕೆ ಬಗ್ಗೆಯೂ ತಪಾಸಣೆ ನಡೆಸಲಾಯಿತು.
ಅಧಿಕಾರಿಗಳ ತಪಾಸಣೆಯ ವೇಳೆ ಅಡುಗೆ ಕೋಣೆಯ ಒಳಗೆ ಶೌಚಾಲಯ ನಿಷೇಧಿತ ಅಡುಗೆ ಕಲರ್ ಪೌಡರ್ ಗಳು, ಮಾಂಸವನ್ನು ಸುರಕ್ಷತೆ ಇಲ್ಲದೆ ಇಟ್ಟಿರುವುದು, ಉತ್ತರ ಭಾರತದ ಕಾರ್ಮಿಕರು ಸುರಕ್ಷತಾ ವಿಧಾನಗಳನ್ನು ಅನುಸರಿಸದೇ ಚಪಾತಿ ರೋಟಿ ಮತ್ತಿತರ ಅಡುಗೆಯನ್ನು ತಯಾರಿಸುತ್ತಿರುವುದು ಕಂಡುಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ದಿನದ 24 ಗಂಟೆ ಹೋಟೆಲ್ ತೆರೆಯುವ ಬಗ್ಗೆ ಅನುಮತಿ ಪತ್ರ, ಅನಧಿಕೃತವಾಗಿ ಊಟದೊಂದಿಗೆ ಬಿಯರ್ ಪೂರೈಕೆ ಮತ್ತು ಇತರ ಹಲವಾರು ವಿಚಾರಗಳ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಪ್ರತೀಕ್ ಶೆಟ್ಟಿ ಅವರು ಈ ಹಿಂದೆ ಇದೇ ಹೋಟೆಲಿನಲ್ಲಿ ರಾತ್ರಿಯ ವೇಳೆ ಊಟಕ್ಕೆ ಹೋದಾಗ ಬೆಕ್ಕು ತಿನ್ನುತ್ತಿದ್ದ ಬಿರಿಯಾನಿಯನ್ನೇ ನಮಗೆ ಪೂರೈಕೆ ಮಾಡಿದ್ದಾರೆ ಇದನ್ನು ಆಕ್ಷೇಪಿಸಿದಾಗ ಉಡಾಫೆ ಆಗಿ ವರ್ತಿಸಿದ್ದಾರೆ. ಪ್ರಾಣಿಗಳು ತಿಂದ ಊಟವನ್ನು ಸೇವಿಸಿದರೆ ಅನಾರೋಗ್ಯ ಕೀಡಾಗುವ ಸಾಧ್ಯತೆಯಿದ್ದು ಆರೋಗ್ಯಕ್ಕೆ ಮಾರಕವಾದ ಆಹಾರ ಪೂರೈಕೆ ಮಾಡುತ್ತಿರುವ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗಕ್ಕೆ ದೂರು ನೀಡಿದ್ದೆವು , ಇಂತಹ ಹೋಟೆಲ್ ಗಳಿಗೆ ವ್ಯವಹಾರಕ್ಕೆ ಅವಕಾಶ ನೀಡದಿರುವುದೇ ಒಳಿತು ಎಂದು ತಿಳಿಸಿದರು.