ಕಾಸರಗೋಡು, ಮಾ.07(DaijiworldNews/TA): ಸ್ಪೋಟಕ ಸಿಡಿದು ಸಾಕು ನಾಯಿ ಮೃತಪಟ್ಟ ಘಟನೆ ಕಾಸರಗೋಡಿನ ಕುಂಬಳೆ ಠಾಣಾ ವ್ಯಾಪ್ತಿಯ ಹೇರೂರು ಮೀಪಿರಿಯಲ್ಲಿ ನಡೆದಿದೆ. ಸ್ಪೋಟಕ ಇರಿಸಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದು, ಜೀಪನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಕುಂಡಂಗುಳಿಯ ಉಣ್ಣಿಕೃಷ್ಣನ್ (48) ಬಂಧಿತ ಆರೋಪಿ. ಕಾಡು ಹಂದಿಗಾ ಗಿ ಸ್ಪೋಟಕ ವಸ್ತು ಇರಿಸಲಾಗಿತ್ತು ಎನ್ನಲಾಗಿದೆ. ಶಬ್ದ ಕೇಳಿ ಪರಿಸರ ವಾಸಿಗಳು ಶೋಧ ನಡೆಸಿದಾಗ ನಾಯಿ ಸತ್ತು ಬಿದ್ದಿದ್ದು, ಗಮನಿಸಿದಾಗ ಶಂಕಿತ ರೀತಿಯಲ್ಲಿ ಜೀಪು ಹಾಗೂ ಓರ್ವನನ್ನು ಪತ್ತೆ ಹಚ್ಚಿ ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಉಣ್ಣಿ ಕೃಷ್ಣನ್ ಹಾಗೂ ಜೀಪನ್ನು ವಶಕ್ಕೆ ತೆಗೆದು ಕೊಳ್ಳ ಲಾಯಿತು.
ಈತನ ಬಳಿ ಯಿಂದ ಎರಡು ಸ್ಪೋಟಕ ಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಹೇರೂರು ಮೀಪಿರಿಯ ಭಾಸ್ಕರ ಎಂಬವರ ಮನೆ ಪರಿಸರದಲ್ಲಿ ಸ್ಫೋಟ ಸಂಭವಿಸಿದ್ದು, ಇವರ ಸಾಕು ನಾಯಿ ಸ್ಪೋಟಕ ಬಲಿಯಾಗಿದೆ. ಹಂದಿ ಬೇಟೆಗೆ ಸುಮಾರು ಹತ್ತು ಮಂದಿಯ ತಂಡವು ಬಂದಿತ್ತು ಎನ್ನಲಾಗಿದೆ . ಉಳಿದವರ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿ ದ್ದು , ಸ್ಥಳದಿಂದ ಓರ್ವನನ್ನು ಬಂಧಿಸಲಾಯಿತು.