ಉಡುಪಿ, ಮಾ.08 (DaijiworldNews/AA): 70 ವರ್ಷದ ವೃದ್ಧೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಉಡುಪಿಯ ಓಕುಡೆ ಲೇಔಟ್, 6 ನೇ ಕ್ರಾಸ್ ಬಳಿ ನಡೆದಿದೆ.

ಮೃತ ವೃದ್ಧೆಯನ್ನು ಕಾವೇರಿ (70) ಎಂದು ಗುರುತಿಸಲಾಗಿದೆ. ಅವರ ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ನಗರ ಪೊಲೀಸ್ ಠಾಣೆಯ ಪಿಎಸ್ಐ ಗೋಪಾಲಕೃಷ್ಣ ಜೋಗಿ, ಎಎಸ್ಐ ಸುಭಾಷ್ ಕಾಮತ್, ಹೆಡ್ ಕಾನ್ಸ್ಟೇಬಲ್ ಸುಷ್ಮಾ ಅವರು ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ವೊಳಕಾಡ್ ಅವರ ಸಹಾಯದಿಂದ ಕಾನೂನು ಪ್ರಕ್ರಿಯೆಗಳನ್ನು ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.