ಮಂಗಳೂರು,ಮಾ.10(DaijiworldNews/TA): ಮಂಗಳೂರು ವಿಶ್ವವಿದ್ಯಾಲಯ 2024ರ ಜುಲೈಯಲ್ಲಿ ನಡೆದ ಪದವಿ ಪರೀಕ್ಷೆಯಲ್ಲಿ ಮಿಲಾಗ್ರಿಸ್ಕಾಲೇಜ್, ಮಂಗಳೂರಿನ ಮೂರು ವಿದ್ಯಾರ್ಥಿಗಳು ರ್ಯಾಂಕ್ ಗಳಿಸಿದ್ದಾರೆ.

ಬಿ.ಎಸ್ಸಿ. (ಹೋಸ್ಪಿಟ್ಯಾಲಿಟಿ ಸಾಯನ್ಸ್) ವಿಭಾಗದ ಕು. ಜೆಸ್ಲಿನ್ ಜೇನ್ ರೊಡ್ರಿಗಸ್ ಇವರು 88.98% ಅಂಕಗಳೊಂದಿಗೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಇವರು ದಾಮಸ್ಕಟ್ಟೆ, ಎಲ್ಲಿಂಜೆಯ ಶ್ರೀ ಫಾನ್ಸಿಸ್ ಐವನ್ ರೊಡ್ರಿಗಸ್ ಹಾಗೂ ಶ್ರೀಮತಿ ಜೆಸಿಂತಾ ರೊಡ್ರಿಗಸ್ ದಂಪತಿಗಳ ಸುಪುತ್ರಿ. ಬಿ.ಎಸ್ಸಿ. (ಫುಡ್ ನ್ಯೂಟ್ರೀಷನ್ ಡಯಟೆಟಿಕ್ಸ್) ವಿಭಾಗದ ಕು. ಹಜೀರಾ ಎಲ್ಫಾ ಇವರು 91.27% ಅಂಕಗಳೊಂದಿಗೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಈಕೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಶ್ರೀ ಮೊಹಮ್ಮದ್ ಕಿಫಾಯತುಲ್ಲ ಮುಲ್ಲ ಹಾಗೂ ಶ್ರೀಮತಿ ತಸ್ನೀಮ್ ಬಾನು ದಂಪತಿಗಳ ಸುಪುತ್ರಿ.
ಬಿ.ಎಸ್ಸಿ. (ಇಂಟೀರಿಯರ್ ಡಿಝೈನ್ ಆಂಡ್ ಡೆಕೊರೇಷನ್) ವಿಭಾಗದ ಕು. ಸುರಯ್ಯ ಸದಫ್ ಇವರು 91.08% ಅಂಕಗಳೊಂದಿಗೆ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಈಕೆ ಗುರುಪುರ ಕೈಕಂಬದ ಶ್ರೀ ಮೊಹಮ್ಮದ್ ಹಶೀಮ್ ಹಾಗೂ ಶ್ರೀಮತಿ ರೆಹನ ಪರ್ವೀನ್ ದಂಪತಿಗಳ ಸುಪುತ್ರಿ. ಇವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.