ಮಂಗಳೂರು, ಮಾ.13 (DaijiworldNews/AK):ಆದಾಯ ತೆರಿಗೆ ಇಲಾಖೆ ಮಹಿಳಾ ಸಂಘಟನೆ ಹಾಗೂ ಕ್ರೀಡಾ ಹಾಗೂ ಮನೋರಂಜನ ಕೂಟ ಇದರ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾ. 12 ರಂದು ಆದಾಯ ತೆರಿಗೆ ಇಲಾಖೆ ಅತ್ತವರದಲ್ಲಿ ಆಚರಿಸಲಾಯಿತು.











ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರೊ. ಎ. ಮಿತ್ರಾ ಎಸ್ ರಾವ್, ಟ್ರಸ್ಟಿ ಶ್ರೀನಿವಾಸ್ ಕಾಲೇಜ್ ಆಫ್ ಯೂನಿವರ್ಸಿಟಿ ಹಾಗೂ ಗೌರವ ಅತಿಥಿಯಾಗಿ ಡಾ. ಲೀಸಾ ಪಿಂಟೋ ಭಾಗವಹಿಸಿ ಮಹಿಳಾ ಪ್ರಾಮುಖ್ಯತೆ ಹಾಗೂ ಮಹಿಳೆಯರ ಸಾಮಾನ್ಯ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಮ್ಮ ಭಾಷಣದಲ್ಲಿ ವಿವರಿಸಿದರು.
ಇದೇ ಕಾರ್ಯಕ್ರಮದಲ್ಲಿ ಮಹಿಳಾ ಉದ್ಯೋಗಿಗಳಾದ ಮಿಸ್. ಅಮ್ರೀನ್ ಮತ್ತು ಮಿಸ್. ಸ್ನೇಹ ಎಸ್ಎಸ್ ಇವರನ್ನು ರಾಷ್ಟ್ರೀಯ ಕ್ರೀಡಾಕೂಟಗಳಾದ ಹಾಮರ್ ತ್ರೋ ಮತ್ತು ನೂರು ಮೀಟರ್ ಓಟಗಳಲ್ಲಿ ಪ್ರಥಮ ಬಹುಮಾನ ಗಳಿಸಿದ್ದಕ್ಕಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೂಟದ ಗೌರವಾಧ್ಯಕ್ಷರಾದ ಆದಾಯ ತೆರಿಗೆ ಆಯುಕ್ತ ಅಪಿಲ್ ವಿಭಾಗದ ಶ್ರೀರಂಗ ರಾಜನ್ ಎಸ್. ಹಾಗೂ ಕೂಟದ ಅಧ್ಯಕ್ಷ ಅಪಾರ ಆಯುಕ್ತರಾದ ಶ್ರೀ ಮನಿಕಂಟನ್ ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆದಾಯ ತೆರಿಗೆ ಅಧಿಕಾರಿಯಾದ ಶ್ರೀಮತಿ ಸೀಮಾ ಕಾರ್ಯಕ್ರಮ ನಿರೂಪಿಸಿದರು. ಆದಾಯ ತೆರಿಗೆ ಇಲಾಖೆ ನಿರೀಕ್ಷಕರಾದ ಶ್ರೀಮತಿ ಲಕ್ಷ್ಮಿ ವಂದಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ಕುರಿತು ಉಪಸ್ಥಿತರೊಂದಿಗೆ ಚರ್ಚೆ ನಡೆಸಲಾಯಿತು. ಐಟಿಎಸ್ಆರ್ಸಿ, ಮಂಗಳೂರು ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಇಲಾಖೆಯ ಅಧಿಕಾರಿಗಳು, ಗಣ್ಯರು ಮತ್ತು ಅತಿಥಿಗಳು ಉತ್ಸಾಹದಿಂದ ಭಾಗವಹಿಸಿದರು.