ಬಂಟ್ವಾಳ, ಮಾ.13 (DaijiworldNews/AA): ಕರಾವಳಿ ಭಾಗದಲ್ಲಿ ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ಅನೇಕ ಕಡೆಗಳಲ್ಲಿ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.





ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ಗ್ರಾಮದ ಜಯಂತ ಗೌಡ ಅವರ ಮನೆಗೆ ಭಾಗಶಃ ಹಾನಿಯಾಗಿದೆ. ಚೆನ್ನೈತ್ತೋಡಿ ಗ್ರಾಮದ ಕರಿಮಲೆ ಎಂಬಲ್ಲಿ ಶಿವರಾಯ ನಾಯಕ್ ರವರ ಅಡಿಕೆ ಹಾಗೂ ಬಾಳೆ ಕೃಷಿಗೆ ಹಾನಿಯಾಗಿದೆ.
ಬಂಟ್ವಾಳದ ಪಿಲಿಮೊಗರು ಗ್ರಾಮದ ಸುಣ್ಣಡಪೋಳಿ ಸುಂದರ ಎಂಬವರ ವಾಸ್ತವ್ಯದ ಮನೆಗೆ ಹಾನಿ, ಬಂಟ್ವಾಳದ ಪಿಲಿಮೊಗರು ಗ್ರಾಮದ ದಪ್ಪರಬೈಲು ವೆಂಕಪ್ಪ ಶೆಟ್ಟಿ ಅವರ ಅಡಿಕೆ ಕೃಷಿಗೆ ಹಾನಿ, ಬಂಟ್ವಾಳದ ಪಿಲಿಮೊಗರು ಗ್ರಾಮದ ಪ್ರಭಾಕ್ಷಿರವರ ವಾಸ್ತವ್ಯದ ಮನೆಗೆ ತಾಗಿಕೊಂಡ ಕೊಟ್ಟಿಗೆಗೆ ಹಾನಿಯಾಗಿದೆ. ಬಂಟ್ವಾಳ ಕಸ್ಬಾ ಗ್ರಾಮದ ಅರಬ್ಬೀ ಗುಡ್ಡೆನಿವಾಸಿ ಚಿಕ್ಕ ಎಂಬವರ ವಾಸ್ತವ್ಯದ ಮನೆಗೆ ಮರಬಿದ್ದು ಹಾನಿಯಾಗಿದೆ.
ಬಂಟ್ವಾಳ ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.