ಮಂಗಳೂರು, ಮಾ.14 (DaijiworldNews/AK):ನಾಟಕ ರಂಗ ಹಾಗೂ ತುಳು ಚಿತ್ರರಂಗದಲ್ಲಿ ಪ್ರಚಂಡ ಕುಳ್ಳನಾಗಿ ಗುರುತಿಸಿಕೊಂಡಿದ್ದ ಕಲಾವಿದ ವಿವೇಕ್ ಮಾಡೂರು (52) ಅವರು ಮಾಡೂರಿನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಮೃತ ವಿವೇಕ್ ಅವರು ಪತ್ನಿ ವೇದಾವತಿ ಜೊತೆ ಉಳ್ಳಾಲ ತಾಲೂಕಿನ ಮಾಡೂರಿನ ಸಹೋದರನ ಮನೆಯಲ್ಲಿ ವಾಸವಾಗಿದ್ದರು. ಈ ಹಿಂದೆ ಟೆಲಿಫೋನ್ ಎಸ್ ಟಿಡಿ ಬೂತ್ ನಡೆಸುತ್ತಿದ್ದ ವಿವೇಕ್ ಅವರು ಬೂತ್ ಮುಚ್ಚಿದ ಬಳಿಕ ಸಹೋದರನ ದಿನಸಿ ಅಂಗಡಿಯಲ್ಲಿ ಪ್ಲಾಸ್ಟಿಕ್ ಮನೆ ಬಳಕೆಯ ಸಾಮಾಗ್ರಿಗಳ ಮಾರಾಟ ನಡೆಸುತ್ತಿದ್ದರು.
ವೃತ್ತಿಪರ ಹಾಸ್ಯ ಕಲಾವಿದರಾಗಿದ್ದ ವಿವೇಕ್ ಅವರು ಕರಾವಳಿಯ ಹೆಸರಾಂತ ನಾಟಕ ತಂಡಗಳಲ್ಲಿ ಅಭಿನಯಿಸಿದಲ್ಲದೆ, ತುಳು ಚಿತ್ರಗಳಲ್ಲಿ ಕೋಸ್ಟಲ್ ವುಡ್ ನ ಮೇರು ಕಲಾವಿದರೊಂದಿಗೆ ನಟಿಸಿದ್ದಾರೆ. ತುಳು ನಾಟಕ ಕಲಾವಿದರ ಒಕ್ಕೂಟದಲ್ಲೂ ಅವರು ಸದಸ್ಯರಾಗಿದ್ದರು. ವಿವೇಕ್ ಅವರ ಕಲಾ ಪ್ರಾವಿಣ್ಯತೆಗೆ ಅನೇಕ ಸಂಘ, ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ. ಅವರ ಅಕಾಲಿಕ ಅಗಲಿಕೆಗೆ ತುಳು ರಂಗಭೂಮಿ ,ಕೋಸ್ಟಲ್ ವುಡ್ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ.