ಉಳ್ಳಾಲ,ಮಾ.17(DaijiworldNews/TA) : ಮುಡಿಪುವಿನ ಕ್ಷೇತ್ರ ಪಾವಿತ್ರತೆಯ ಯಾತ್ರಾ ಕೇಂದ್ರವಾಗಿರುವುದರಿಂದ ಬೇರೆ ಊರುಗಳಿಂದ ಜನ ಬರುವಂತಹ ವಾತಾವರಣ ನಿರ್ಮಾಣಗೊಂಡಿದೆ. ಮುಂದಿನ ವರ್ಷದಲ್ಲಿ ಮುಡಿಪು ಚರ್ಚ್ 5೦ ವರ್ಷದ ಸಂಭ್ರಮೋತ್ಸವವನ್ನು ಆಚರಿಸಲಿದೆ.




ಊರ ಪಾವಿತ್ರತೆಯ ಸಂಕೇತವಾಗಿರುವ ಚರ್ಚಿನ ಎಲ್ಲಾ ಕಾರ್ಯಕ್ರಮಗಳಿಗೆ ಸರಕಾರದ ವತಿಯಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ ದಕ್ಷಿಣ ವಲಯದ ಮುಂದಾಳತ್ವದಲ್ಲಿ ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರ, ಮುಡಿಪು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಮಹಾನ್ ಕಾಲ್ನಡಿಗೆ ಜಾಥಾ ನಮ್ಮ ನಡಿಗೆ ಮುಡಿಪು ಪುಣ್ಯ ಕ್ಷೇತ್ರದ ಕಡೆಗೆ ( ಗ್ರಾಂಡ್ ಮ್ಯಾರಥಾನ್ ) ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಲ್ವಿನ್ ಡಿಸೋಜ ಶುಭನುಡಿಗಳನ್ನಾಡಿದರು. ಮಂಗಳೂರು ಧರ್ಮ ಪ್ರಾಂತದ ವಿಶ್ರಾಂತ ಬಿಷಪ್ ಅತೀ ವಂದನೀಯ ರೆ| ಫಾ| ಅಲೋಷಿಯಸ್ ಪಾವ್ಲ್ ಡಿ.ಸೋಜಾ ಆಶೀರ್ವಚನ ನೀಡಿದರು. ಪಾನೀರು ಚರ್ಚ್ನ ಧರ್ಮ ವಿಕ್ಟರ್ ಡಿ. ಮೆಲ್ಲೂ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಂಸಿಸಿ ಬ್ಯಾಂಕ್ನ ಅಧ್ಯಕ್ಷ ಅನಿಲ್ ಲೋಬೋ, ಮಾಜಿ ಅಧ್ಯಕ್ಷ ರಾಲಿ ಡಿ.ಕೋಸ್ಟಾ, ಮಂಗಳೂರು ಕಥೋಲಿಕ್ ಡಯಾಸಿಸ್ ಮಾಜಿ ಕಾರ್ಯದರ್ಶಿ ಎಂ.ಪಿ. ನೊರೊನ್ಹಾ, ಕ್ಲಿಫರ್ಡ್ ಲೋಬೋ, ಧರ್ಮ ಗುರುಗಳಾದ ರೆ| ಫಾ| ಅಸ್ಸಿಸ್ಸಿ ರೆಬೆಲ್ಲೋ, ಉಪಸ್ಥಿತರಿದ್ದರು. ದೇರಳಕಟ್ಟೆ ಪಾನೀರು ಚರ್ಚ್ನಿಂದ ಮುಡಿಪು ಚರ್ಚ್ ವರೆಗೆ ಸುಮಾರು 15ಕಿ. ಮೀ. ವರೆಗೆ ನಡೆದ ಪಾದಯಾತ್ರೆಯಲ್ಲಿ ಸುಮಾರು ನಾಲ್ಕು ವರ್ಷದಿಂದ ಹಿರಿಯರು ಸೇರಿದಂತೆ ಸಹಸ್ರಾರು ಭಕ್ತಾದಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದರು.