ಉಡುಪಿ, ಮಾ.17 (DaijiworldNews/AA): ಬ್ರಹ್ಮಾವರದ ಚಂತಾರು ಎಂಬಲ್ಲಿನ ಡೈರಿ ಬಳಿಯ ರೈಲ್ವೆ ಹಳಿಯಲ್ಲಿ ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾರ್ಚ್ 16 ರಂದು ನಡೆದಿದೆ.

ಮಾಹಿತಿ ಪಡೆದ ಬಾರ್ಕೂರು ರೈಲ್ವೆ ಗ್ಯಾಂಗ್ ಮ್ಯಾನ್ ಪ್ರಶಾಂತ್ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಸುಮಾರು 25 ರಿಂದ 35 ವರ್ಷ ವಯಸ್ಸಿನ ಗುರುತು ಪತ್ತೆಯಾಗದ ವ್ಯಕ್ತಿಯ ಮೃತದೇಹ ರೈಲ್ವೆ ಹಳಿಯ ಮೇಲೆ ಬಿದ್ದಿರುವುದು ಪತ್ತೆಯಾಗಿದೆ.
ಮೃತಪಟ್ಟವರು ಯಾವುದೋ ಕಾರಣಕ್ಕೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.