ವಿಟ್ಲ, ಮಾ.19 (DaijiworldNews/AA): ಡ್ರೆಸ್ ಶಾಪ್ನಲ್ಲಿ ಒಂಟಿ ಮಹಿಳೆ ಕೆಲಸ ಮಾಡುತ್ತಿದ್ದ ವೇಳೆ ನವೀನ್ ಕುಂಪಲ ಮತ್ತು ಇತರ ನಾಲ್ಕು ಜನ ಏಕಾಏಕಿ ಅಂಗಡಿಯೊಳಗೆ ಅಕ್ರಮ ಪ್ರವೇಶ ಮಾಡಿ ಬೆದರಿಸಿ ಅಂಗಡಿಯಲ್ಲಿದ್ದ ಬಟ್ಟೆ ಮತ್ತು ವಸ್ತುಗಳನ್ನು ದೋಚಿ ಪರಾರಿಯಾದ ಘಟನೆ ವಿಟ್ಲ ಶಾಲಾ ರಸ್ತೆ ಬಳಿ ಮಾರ್ಚ್ 18ರಂದು ನಡೆದಿದೆ.

ಮಾ. 18 ರ ಮಧ್ಯಾಹ್ನ ವೇಳೆ ಏಕಾಏಕಿ ಅಂಗಡಿಗೆ ನಾಲ್ಕು ಜನರ ತಂಡ ಅಕ್ರಮ ಪ್ರವೇಶ ಮಾಡಿದೆ. ಬಳಿಕ ಈ ತಂಡ ಅಂಗಡಿಯಲ್ಲಿರುವ ವಸ್ತುಗಳನ್ನು ಹಾಗೂ ಬಟ್ಟೆಯನ್ನು ತನ್ನ ಬ್ಯಾಗಿನೊಳಗೆ ತುಂಬಿಸಿ ಕೊಂಡೋಯ್ಯಲು ಪ್ರಯತ್ನಿಸುತ್ತಿದ್ದಾಗ ಮಹಿಳಾ ಸಿಬ್ಬಂದಿಯು ಯಾಕೆ ಬಟ್ಟೆಗಳನ್ನು ತುಂಬಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಆರೋಪಿಗಳು "ನಿನಗೆ ಎಷ್ಟು ಕೆಲಸವಿದೆಯೋ ಅಷ್ಟೇ ಮಾಡು. ನಮ್ಮ ಸುದ್ದಿಗೆ ಬಂದ್ರೆ ಜಾಗೃತೆ" ಎಂದು ಬೆದರಿಸಿ ಬಲಾತ್ಕಾರದಿಂದ ಬಟ್ಟೆ ಮತ್ತು ವಸ್ತುಗಳನ್ನು ಕೊಂಡೊಯ್ದು ಪರಾರಿಯಾಗಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.