ಉಳ್ಳಾಲ, ಮಾ.21(DaijiworldNews/AK):ಸಯ್ಯಿದ್ ಮದನಿ ಅರಬಿಕ್ ಟ್ರಸ್ಟ್ ಅಧೀನದಲ್ಲಿ ನಡೆದ ೨೦೨೪-೨೫ ಸಾಲಿನ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಕಂಝುಲ್ ಉಲೂಂ ಮದ್ರಸ ಶೇ.೧೦೦ ಫಲಿತಾಂಶ ದಾಖಲಿಸಿದೆ.

ವಿದ್ಯಾರ್ಥಿಗಳಾದ ಐದನೇ ತರಗತಿಯ ಮರಿಯಮ್ ಅಲೀನ(557), ನಫೀಸ ಹಯ(554) ಹಾಗೂ ಏಳನೇ ತರಗತಿಯ ಮುಹಮ್ಮದ್ ಅಸಿಲ್(563) ಅಂಕಗಳೊಂದಿಗೆ ಸಯ್ಯದ್ ಮದನಿ ಅರಬಿಕ್ ಟ್ರಸ್ಟ್ನ 33ಮದ್ರಸಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಮದ್ರಸ ಮುಖ್ಯಶಿಕ್ಷಕ ಅಮೀನ್ ಮಖ್ದೂಮಿ ತಿಳಿಸಿದ್ದಾರೆ.
ಸಾಧಕ ವಿದ್ಯಾರ್ಥಿಗಳಿಗೆ ಮೇಲಂಗಡಿ ಮಸೀದಿಯ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಅಭಿನಂದನೆ ಸಲ್ಲಿಸಿದ್ದಾರೆ.