ಮಂಗಳೂರು/ಉಡುಪಿ, ಮಾ.31 (DaijiworldNews/AA): ಮಂಗಳೂರು ನಗರ ಮತ್ತು ಉಡುಪಿ ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರು ಇಂದು ಈದ್-ಉಲ್-ಫಿತರ್ ಅನ್ನು ಸಡಗರದಿಂದ ಆಚರಿಸಿದರು. ರಂಜಾನ್ ಹಬ್ಬ ಆಚರಣೆ ಮಾಡುವ ಮೂಲಕ 30 ದಿನಗಳ ಉಪವಾಸ ಅಂತ್ಯವಾಗಿದೆ. ಈ ಸಂದರ್ಭದಲ್ಲಿ ನಮಾಜ್ ಸಲ್ಲಿಸಲು ಮಸೀದಿಗಳು ಮತ್ತು ತೆರೆದ ಪ್ರಾರ್ಥನಾ ಮೈದಾನಗಳಲ್ಲಿ ಭಕ್ತರು ಜಮಾಯಿಸಿದರು.





















ಮಂಗಳೂರು




ಉಡುಪಿ
ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ, ಕುಟುಂಬಗಳು ಮತ್ತು ಸ್ನೇಹಿತರು ಈದ್ನ ಸಾರವನ್ನು ಹಂಚಿಕೊಳ್ಳಲು ಒಟ್ಟಾಗಿ ಸೇರಿದರು. ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಉಪವಾಸ, ಪ್ರಾರ್ಥನೆ ಮತ್ತು ಆತ್ಮಾವಲೋಕನದ ಒಂದು ತಿಂಗಳ ಪೂರ್ಣಗೊಳಿಸುವಿಕೆಯನ್ನು ಸಂಕೇತಿಸುವ ಈ ಹಬ್ಬವನ್ನು ಅಪಾರ ಗೌರವದಿಂದ ಆಚರಿಸಲಾಯಿತು.
ಲೈಟ್ ಹೌಸ್ ಹಿಲ್ ರಸ್ತೆಯಲ್ಲಿರುವ ಈದ್ಗಾ ಮಸೀದಿ ಮತ್ತು ಕುದ್ರೋಳಿಯ ಜಾಮಿಯಾ ಮಸೀದಿ ಸೇರಿದಂತೆ ಮಂಗಳೂರಿನ ಪ್ರಮುಖ ಮಸೀದಿಗಳಲ್ಲಿ ಈದ್ ಪ್ರಾರ್ಥನೆಗಳು ಪ್ರತಿಧ್ವನಿಸಿದವು.
ಇನ್ನು ಉಡುಪಿಯಲ್ಲಿ ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಮಸೀದಿಗಳಿಗೆ ಆಗಮಿಸಿ ನಮಾಜ್ ಸಲ್ಲಿಸಿದರು. ಗಂಗೊಳ್ಳಿ, ಉಡುಪಿ ನಗರ, ಕಾಪು, ಕುಂದಾಪುರ ಮತ್ತು ಜಿಲ್ಲೆಯ ಇತರ ಭಾಗಗಳ ಮಸೀದಿಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಧಾರ್ಮಿಕ ಆಚರಣೆಗಳ ಜೊತೆಗೆ, ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.