ಮಂಗಳೂರು/ಉಡುಪಿ, ಏ.02 (DaijiworldNews/AA): ರಾಜ್ಯ ಸರ್ಕಾರ ಮತ್ತು ಕೆಎಂಎಫ್ ನಿರ್ದೇಶನದಂತೆ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಂದಿನಿ ಹಾಲು ಮತ್ತು ಮೊಸರಿನ ದರಗಳನ್ನು ಪರಿಷ್ಕರಿಸಲಾಗಿದೆ.

ಪರಿಷ್ಕೃತ ದರದ ಪ್ರಕಾರ, ಟೋನ್ಡ್ ಹಾಲು 500 ಮಿಲೀಗೆ 24 ರೂ. ಮತ್ತು 1000 ಮಿಲೀಗೆ 46 ರೂ. ಆಗಿದೆ. ಆದರೆ ಹೋಮೋಜಿನೈಸ್ಡ್ ಹಸುವಿನ ಹಾಲು 500 ಮಿಲೀಗೆ 26 ರೂ. ಮತ್ತು 6 ಲೀಟರ್ ಜಂಬೋ ಪ್ಯಾಕ್ಗೆ 312 ರೂ ಆಗಿದೆ. ಶುಭಂ ಹಾಲು 500 ಮಿಲೀಗೆ 27 ರೂ. ಮೊಸರಿನ ದರವನ್ನು 200 ಗ್ರಾಂಗೆ 15 ರೂ. 415 ಗ್ರಾಂಗೆ 27 ರೂ. ಮತ್ತು 6 ಕೆಜಿ ಜಂಬೋ ಪ್ಯಾಕ್ಗೆ 336 ರೂ. ಎಂದು ನಿಗದಿಪಡಿಸಲಾಗಿದೆ. ಇತರ ಡೈರಿ ಉತ್ಪನ್ನಗಳಲ್ಲಿ, ಸಿಹಿ ಲಸ್ಸಿ (200 ಮಿಲೀ) 15 ರೂ. ಮಾವಿನ ಲಸ್ಸಿ (200 ಮಿಲೀ) 19 ರೂ. ಮಸಾಲಾ ಮಜ್ಜಿಗೆ (200 ಮಿಲೀ) 12 ರೂ. ಸ್ಪೈಸಿ ಮಜ್ಜಿಗೆ (180 ಮಿಲೀ) 8 ರೂ. ಜೀರಾ ಮಜ್ಜಿಗೆ (250 ಮಿಲೀ) ೧೪ ರೂ. ಪ್ಲೇನ್ ಮಜ್ಜಿಗೆ (500 ಮಿಲೀ) 26 ರೂ. ಮತ್ತು ಪ್ಲೇನ್ ಮಜ್ಜಿಗೆ (1000 ಮಿಲೀ) 51 ರೂ. ಆಗಿದೆ.
ಹಳೆಯ ಮುದ್ರಿತ ದರಗಳಿರುವ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಈಗಿರುವ ಪೌಚ್ ಫಿಲ್ಮ್ ಸ್ಟಾಕ್ ಮುಗಿಯುವವರೆಗೆ ಮಾರಾಟ ಮಾಡಲಾಗುತ್ತದೆ. ಆದಾಗ್ಯೂ, ಎಲ್ಲಾ ಗ್ರಾಹಕರು ಮತ್ತು ಅಧಿಕೃತ ನಂದಿನಿ ವಿತರಕರು ಪರಿಷ್ಕೃತ ದರಗಳನ್ನು ಪಾಲಿಸಬೇಕು ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.