ಮಂಗಳೂರು, ಏ.03(DaijiworldNews/AK):ಮೂಡುಬಿದಿರೆಯಿಂದ ಸೂರಲ್ಪಾಡಿ ಮಾರ್ಗವಾಗಿ ಕೈಕಂಬಕ್ಕೆ 19 ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಗಳೂರು ತಾಲೂಕಿನ 62ನೇ ತೋಕೂರು ಗ್ರಾಮದ ಅರಾಫತ್ ಅಲಿ (36), ಮೂಡುಬಿದಿರೆ ತಾಲೂಕಿನ ಪ್ರಾಂತ್ಯ ಗ್ರಾಮದ ಮೊಹಮ್ಮದ್ ಆಫ್ರಿದ್ (27), ಅಬ್ದುಲ್ ನಜೀರ್ (31), ಬೆಳ್ತಂಗಡಿ ತಾಲೂಕಿನ ಪೆರಂತಡ್ಕ ಕಾಶಿಪಟ್ಣದ ಫರೀಸ್ ಸಲ್ಡಾನ್ಹ ಎಂದು ಗುರುತಿಸಲಾಗಿದೆ.
ಬಜ್ಪೆ ಇನ್ಸ್ಪೆಕ್ಟರ್ ಸಂದೀಪ್, ಪಿಎಸ್ಐ ರೇವಣ್ ಸಿದ್ದಪ್ಪ, ಕಾವೂರು ಪೊಲೀಸ್ ಠಾಣೆಯ ಪಿಎಸ್ಐ ಮಲ್ಲಿಕಾರ್ಜುನ್, ಬಜ್ಪೆ ಅಪರಾಧ ಪತ್ತೆ ಘಟಕ ಮತ್ತು ಮಂಗಳೂರು ಉತ್ತರ ಅಪರಾಧ ಪತ್ತೆ ಘಟಕದ ಸಿಬ್ಬಂದಿ ಈ ಕಾರ್ಯಾಚರಣೆಯನ್ನು ನಡೆಸಿದರು.