ಮಂಗಳೂರು,ಏ.03(DaijiworldNews/AK): ಕರಾವಳಿಯಲ್ಲಿ ಜನಸಾಮನ್ಯರ ಮೀನು ಎಂದೇ ಪ್ರಸಿದ್ಧಿ ಪಡೆದ ದೊಡ್ಡ ಬೂತಾಯಿಗೆ ಇದೀಗ ಬರಗಾಲ ಬಂದಂತಿದೆ. ಸಾಮನ್ಯವಾಗಿ ಬೂತಾಯಿಯಲ್ಲಿ ದೊಡ್ಡ ಅಥಾವಾ ಮಲ್ಲ ಬೂತಾಯಿ ಹಾಗೂ ತರು ಬೂತಾಯಿ ಎಂಬ ಎರಡು ಪ್ರಬೇಧಗಳಿವೆ. ಇದೀಗ ಕಳೆದ ಒಂದು ವರ್ಷದಿಂದ ಸಮುದ್ರದಲ್ಲಿ ಮಲ್ಲ ಬೂತಾಯಿ ಸಂಪೂರ್ಣವಾಗಿ ಕಾಣೆಯಾಗಿದೆ ಎಂದು ಮೀನುಗಾರರು ಹೇಳುತ್ತಿದ್ದಾರೆ.

ಹದಿನೈದು ಸೆಂಟಿ ಮೀಟರಿನಷ್ಟು ಉದ್ದವಿರುವ ಮಲ್ಲ ಬೂತಾಯಿ ಸಿಗದ ಕಾರಣ ಮೀನುಗಾರರ ಆದಾಯದಲ್ಲೂ ದೊಡ್ಡ ಮಟ್ಟದಲ್ಲಿ ಕುಸಿತ ಕಂಡುಬಂದಿದೆ. ಜಾಗತಿಕ ಹವಮಾನ ವೈಪರೀತ್ಯದ ಫಲವಾಗಿ ದೊಡ್ಡ ಬೂತಾಯಿ ಕಾಣೆಯಾಗಿದ್ದು ಮುಂದೆ ಇದು ದೊರಕಲಿದೆಯೋ ಎಂಬ ಸಂದೇಹವಿದೆಯೆಂದು ಮೀನುಗಾರಿಕಾ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಸಾಮನ್ಯವಾಗಿ ಕೆಜಿಗೆ 200 ರೂ ಗಳಿಂದ 300 ರೂಗಳಿಗೆ ಮಾರಾಟವಾಗುತ್ತಿದ್ದ ಮಲ್ಲ ಬೂತಾಯಿ ಮೀನುಗಾರರ ಜೊತೆಗೆ ಸಾಮನ್ಯ ಮೀನು ಮಾರಾಟಗಾರರಿಗೂ ಉತ್ತಮ ಆದಾಯವನ್ನು ತಂದು ಕೊಡುತ್ತಿತ್ತು. ಆದರೆ ಕಳೆದ ಒಂದು ವರ್ಷದಿಂದೀಚೆಗೆ ವಿಶೇಷ ಬೇಡಿಕೆಯಿಲ್ಲದ ತರು ಬೂತಾಯಿ ಮಾತ್ರ ಲಭಿಸುತ್ತಿದ್ದು ಕೆಜಿಗೆ 100 ರೂಪಾಯಿಗಳಿಗೆ ಮಾರಟ ಮಾಡುವ ಒತ್ತಡಕ್ಕೆ ಸಿಲುಕಿದ್ದೇವೆ ಎಂದು ಮೀನುಗಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.