ಮಂಗಳೂರು, ಏ.03(DaijiworldNews/AK):ಕರಾವಳಿ ಕರ್ನಾಟಕದ ರಿಯಲ್ ಎಸ್ಟೇಟ್ ಸಂಸ್ಥೆ ರೋಹನ್ ಕಾರ್ಪೊರೇಶನ್ ತನ್ನ ಮತ್ತೊಂದು ಹೊಸ ಅಪಾರ್ಟ್’ಮೆಂಟ್ ಯೋಜನೆ ‘ರೋಹನ್ ಮಿರಾಜ್’ಗೆ ನಾಳೆ (ಶನಿವಾರ 05, 2025ರಂದು) ಸಂಜೆ 5.00 ಗಂಟೆಗೆ ಭೂಮಿಪೂಜೆಯನ್ನು ನಡೆಸಲಿದೆ.ಈ ಹೊಸ ಯೋಜನೆಯು ಕುಲಶೇಖರ ಬೈತುರ್ಲಿಯ ಪ್ರಧಾನ ರಸ್ತೆಯ ರೋಹನ್ ಎಸ್ಟೇಟ್ ಬಡಾವಣೆಯ ಮುಖ್ಯದ್ವಾರದಲ್ಲಿ ತಲೆ ಎತ್ತಲಿದೆ.


ರೋಹನ್ ಮಿರಾಜ್:
ರೋಹನ್ ಮಿರಾಜ್ ಮಂಗಳೂರಿನ ನಗರ ಜೀವನವನ್ನು ಪುನರ್ವ್ಯಾಖ್ಯಾನಿಸುವ ಉದ್ದೇಶದಿಂದ ಯೋಜನಾಬದ್ಧವಾಗಿ ರೂಪಿಸಲಾದ ಅತ್ತ್ಯುತ್ತಮ ರೆಸಿಡೆನ್ಶಿಯಲ್ ಯೋಜನೆಯಾಗಿ ಈ ಪ್ರಾಜೆಕ್ಟ್ 50 ಉತ್ತಮವಾಗಿ ವಿನ್ಯಾಸಗೊಳಿಸಲಾದ 2 ಬಿ.ಎಚ್.ಕೆ. ಅಪಾರ್ಟ್’ಮೆಂಟ್’ಗಳನ್ನು ಒಳಗೊಂಡಿದೆ, ಇದು ಹತ್ತು ಮಹಡಿಗಳಲ್ಲಿ ಹರಡಿಕೊಂಡಿದ್ದು, ಪ್ರತಿ ಘಟಕವು ಸ್ಥಳಾವಕಾಶ ಮತ್ತು ಸೊಗಸನ್ನು ಹೊಂದಿದೆ.
1060 ರಿಂದ 1080 ಚದರ ಅಡಿ ವಿಸ್ತೀರ್ಣದ ಈ ಅಪಾರ್ಟ್’ಮೆಂಟ್’ಗಳು ಆಧುನಿಕ ನಗರ ಕುಟುಂಬಗಳ ಅವಶ್ಯಕತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ, ಹಾಗೂ ಸೌಕರ್ಯ, ಶೈಲಿ ಮತ್ತು ಕಾರ್ಯಕ್ಷಮತೆಯ ಮಿಶ್ರಣವನ್ನು ಹೊಂದಿದೆ.
ಸ್ವಯಂಚಾಲಿತ ಲಿಫ್ಟ್’ಗಳು, ಪವರ್ ಬ್ಯಾಕಪ್, ವಿಟ್ರಿಫೈಡ್ ಟೈಲ್ ಫ್ಲೋರಿಂಗ್, ಮತ್ತು ಸುರಕ್ಷತೆಗಾಗಿ ಸರ್ವಿಲೆನ್ಸ್ ಕ್ಯಾಮೆರಾಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, ಮಳೆನೀರಿನ ಕೊಯಿಲು ವ್ಯವಸ್ಥೆ ಮತ್ತು ಪರಿಸರ ಸ್ನೇಹಿ ನಿರ್ಮಾಣ ಪದ್ಧತಿಗಳನ್ನು ಒಳಗೊಂಡಿದೆ. ಅತ್ತ್ಯುತ್ತಮ ದರ್ಜೆಯ ಕಟ್ಟಡ ನಿರ್ಮಾಣ ಪರಿಕರಗಳನ್ನು ಉಪಯೋಗಿಸಲಿದ್ದು, ಸಧೃಡ ಬಹುಮಹಡಿ ರೆಸಿಡೆನ್ಶಿಯಲ್ ಕಟ್ಟಡವು ನಿರ್ಮಾಣಗೊಳ್ಳಲಿದೆ.