ಕಾಸರಗೋಡು, ಏ.05 (DaijiworldNews/AA): ಯುವಕನೋರ್ವ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕಾಸರಗೋಡಿನ ಕುಂಡಂಗುಳಿ ಯಲ್ಲಿ ನಡೆದಿದೆ.

ಕುಂಡಂಗುಯಿ ಕಾರಕ್ಕೋಡ್ ನ ದಿನೇಶ (38) ಮೃತಪಟ್ಟ ಯುವಕ.
ಶುಕ್ರವಾರ ಬೆಳಗ್ಗೆ ಸಂಬಂಧಿಕರು ಮನೆಗೆ ಬಂದಾಗ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಮೃತದೇಹದ ಬಳಿ ರಕ್ತದ ಕಲೆಗಳು, ತಲೆಯಲ್ಲಿ ಗಾಯ ಕಂಡುಬಂದಿದೆ.
ಬೇಡಡ್ಕ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ. ಫಾರೆನ್ಸಿಕ್ ತಜ್ಞರು ಮಾಹಿತಿ ಕಲೆ ಹಾಕಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕೂಲಿ ಕಾರ್ಮಿಕರಾಗಿದ್ದ ದಿನೇಶ್ ಗುರುವಾರ ರಾತ್ರಿ ಒಬ್ಬರೇ ಮನೆಯಲ್ಲಿದ್ದರು ಎಂಬ ಎನ್ನಲಾಗಿದೆ.