ವಿಟ್ಲ, ಏ.05 (DaijiworldNews/AK): ಯುವತಿಯರ ಮೊಬೈಲ್ ನಂಬರ್ ಪಡೆದು ಅಶ್ಲೀಲ ಮೆಸೇಜ್ ಕಳುಹಿಸಿ, ಇದೀಗ ಆಕೆಯನ್ನು ಭೇಟಿಯಾಗಲೆಂದು ಬಂದ ಯುವಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ನಡೆದಿದೆ.

ಕನ್ಯಾನ ನಿವಾಸಿ,ಬೆಂಗಳೂರಿನ ಕೋರಮಂಗಲದ ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ಮ್ಯಾನ್ ಆಗಿರುವ ಸವಾದ್ ಇದೀಗ ಪೊಲೀಸರು ವಶವಾದ ಯುವಕ. ಕೆಲದಿನಗಳ ಹಿಂದೆ ಸವಾದ್ ಸ್ಥಳೀಯ ಯುವತಿರೋರ್ವಳ ನಂಬರ್ ಕೇಳಿದ್ದ ಈ ವೇಳೆ ಆಕೆ ಆತನಿಗೆ ತನ್ನ ಪರಿಚಯದ ಸ್ನೇಹಿತನ ನಂಬರ್ ಕೊಟ್ಟಿದ್ದಳು.
ಸವಾದ್ ಯುವತಿಯ ನಂಬರ್ ಎಂದು ಬಾವಿಸಿ ಆಕೆ ನೀಡಿದ್ದ ನಂಬರಿಗೆ ರಾತ್ರಿಯಿಡಿ ಮೆಸೇಜ್ ಮಾಡುತ್ತಿದ್ದ. ಆ ಬಳಿಕ ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದ ಸವಾದ್ ಭೇಟಿಯಾಗಲೆಂದು ಕೆಲಸಕ್ಕೆ ರಜಾ ಹಾಕಿ ಕುಡ್ತಮುಗೇರು ಎಂಬಲ್ಲಿಗೆ ಬಂದಾಗ ಸ್ಥಳೀಯರು ಆತನನ್ನು ಹಿಡಿದು ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.