ಕುಂದಾಪುರ, ಏ.05 (DaijiworldNews/AK):ಗದ್ದೆಯಲ್ಲಿ ಸುಡುಮಣ್ಣು ತಯಾರಿಸುವ ವೇಳೆ ಒಣಹುಲ್ಲಿಗೆ ಬೆಂಕಿ ಆವರಿಸಿಕೊಂಡು ರೈತ ಬೆಂಕಿಗಾಹುತಿಯಾದ ಘಟನೆ ಕಾಳಾವರದ ಬಡಾಗುಡ್ಡೆ ಎಂಬಲ್ಲಿ ನಡೆದಿದೆ.

ಘಟನೆಯಲ್ಲಿ ಸಾವನ್ನಪ್ಪಿದ ವ್ಯಕ್ತಿ ಮಹಾಲಿಂಗ ದೇವಾಡಿಗ(80) ಎಂದು ಗುರುತಿಸಲಾಗಿದೆ. ಗದ್ದೆಯನ್ನು ಶುಚಿಗೊಳಿಸಿ ಮಣ್ಣು ಹಾಕಿ ಬೆಂಕಿಕೊಟ್ಟು ಗೊಬ್ಬರ ತಯಾರಿಸುವ ಪ್ರಕ್ರಿಯೆ ನಡೆಸುತ್ತಿದ್ದ ವೇಳೆ ಘಟನೆ ನಡೆದಿದೆ.
ಗದ್ದೆಗೆ ರಸ್ತೆ ಸಂಪರ್ಕ ಇಲ್ಲದೆ ಅಗ್ನಿಶಾಮಕ ವಾಹನ ಸಿಯಾದ ಸಮಯಕ್ಕೆ ತಲುಪಿಲ್ಲದ ಕಾರಣ ಬೆಂಕಿ ಕೆನ್ನಾಲಗೆಯಿಂದ ಹೊರಬರಲಾಗದೆ ಮಹಾಲಿಂಗ ದೇವಾಡಿ ಗ ಸುಟ್ಟುಹೋಗಿದ್ದಾರೆ.
ಒಣಹುಲ್ಲು ಆವರಿಸಿರುವುದರಿಂದ ಸುತ್ತಮುತ್ತ ಬೆಂಕಿ ಹತ್ತಿಕೊಂಡಿದೆ.ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು