ಬ್ರಹ್ಮಾವರ, ಏ.06 (DaijiworldNews/AA): ಬ್ರಹ್ಮಾವರದ ಮಹೇಶ್ ಆಸ್ಪತ್ರೆ ಜಂಕ್ಷನ್ನ ಬ್ಲ್ಯಾಕ್ ಸ್ಪಾಟ್ನಲ್ಲಿ ಅಪಘಾತಗಳನ್ನು ತಡೆಗಟ್ಟಲು ತಕ್ಷಣದ ಕ್ರಮವಾಗಿ, ಎನ್ಎಚ್ಎಐ ಪ್ರಾಧಿಕಾರವು ರಂಬಲ್ ಪಟ್ಟಿಗಳನ್ನು ಅಳವಡಿಸಿದೆ.




ಬ್ರಹ್ಮಾವರದ ಎರಡು ಪ್ರಮುಖ ಬ್ಲ್ಯಾಕ್ ಸ್ಪಾಟ್ ಗಳಾದ ಮಹೇಶ್ ಆಸ್ಪತ್ರೆ ಜಂಕ್ಷನ್ ಮತ್ತು ಎಸ್ಎಂಎಸ್ ಚರ್ಚ್ ಬಳಿ ರಂಬಲ್ ಪಟ್ಟಿಗಳನ್ನು ಅಳವಡಿಸಲಾಗಿದೆ.
ಶನಿವಾರದಂದು ತಹಶೀಲ್ದಾರ್ ಮತ್ತು ಡಿವೈಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಧಿಕಾರಿಗಳ ತಂಡವು ಬ್ರಹ್ಮಾವರದ ಪ್ರಮುಖ ಜಂಕ್ಷನ್ಗಳು ಮತ್ತು ಈ ಸ್ಥಳಗಳಲ್ಲಿ ಸಂಭವಿಸುವ ಅಪಘಾತಗಳ ಪರಿಣಾಮಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿತ್ತು.
ಈ ಜೀಬ್ರಾ ಕ್ರಾಸಿಂಗ್ಗಳು ಪ್ರಮುಖ ಜಂಕ್ಷನ್ಗಳಲ್ಲಿ ವಾಹನಗಳ ವೇಗವನ್ನು ಕಡಿಮೆ ಮಾಡಿ ಅಪಘಾತಗಳನ್ನು ತಪ್ಪಿಸುವ ಉದ್ದೇಶವನ್ನು ಹೊಂದಿವೆ. ರಚಿಸಲಾದ ತಾಂತ್ರಿಕ ಸಮಿತಿಯು ಏಪ್ರಿಲ್ 7 ರಂದು ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಸಲಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಹೆದ್ದಾರಿ ಸಭೆಯು ಏಪ್ರಿಲ್ 8 ರಂದು ನಡೆಯಲಿದೆ.