ಬಂಟ್ವಾಳ, ಏ.06(DaijiworldNews/TA) : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಹಿನ್ನೆಲೆಯಲ್ಲಿ ಪೊಳಲಿ ಚೆಂಡಿನ ಗದ್ದೆಯಲ್ಲಿ ಮೊದಲ ದಿನದ ಚೆಂಡಿನ ಉತ್ಸವ ಆರಂಭಗೊಂಡಿತು.

ಪ್ರಾರಂಭದಲ್ಲಿ ದೇವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿ ಬಳಿಕ ಚೆಂಡನ್ನು ವಾಲಗದೊಂದಿಗೆ ಗದ್ದೆಯ ಬಳಿಗೆ ಕರೆತಂದು ಚೆಂಡನ್ನು ಹಾರಿಸಲಾಯಿತು. ಯುವಕರು ಹಾಗೂ ಮಕ್ಕಳು ಚೆಂಡಾಟ ಆಡಿದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ತಂತ್ರಿಗಳು, ಅರ್ಚಕರು, ಸೀಮೆಯ ಭಕ್ತರು ಪಾಲ್ಗೊಂಡಿದ್ದರು.