ಸುಳ್ಯ, ಏ.08 (DaijiworldNews/AA): ತನ್ನ ಅಂಗಡಿ ಎದುರು ಬಿದ್ದು ಸಿಕ್ಕಿದ್ದ ಚಿನ್ನದ ಬ್ರಾಸ್ಲೆಟ್ ಅನ್ನು ನಗರದ ಕಟ್ಟೆಕಾರ್ ಹಾರ್ಡ್ವೇರ್ ಮಾಲಕ ಕಬೀರ್ ಕಟ್ಟೆಕಾರ್ ಅವರು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

ಪೇರಾಲಿನ ಶ್ರೀಧರ ಆಚಾರ್ಯ ಅವರ ಜೇಬಲ್ಲಿದ್ದ ಸುಮಾರು ಮುಕ್ಕಾಲು ಪವನ್ ತೂಕದ ಬ್ರಾಸ್ಲೆಟ್ ಬಿದ್ದು ಹೋಗಿದೆ. ತನ್ನ ಚೇಜಲ್ಲಿದ್ದ ಬ್ರಾಸ್ಲೆಟ್ ಬಿದ್ದು ಹೋಗಿರುವುದು ಮನೆಗೆ ತಲುಪಿದಾಗ ಗಮನಕ್ಕೆ ಬಂದಿತ್ತು. ಅವರು ಕಟ್ಟೆಕಾರ್ ಹಾರ್ಡ್ವೇರ್ನಲ್ಲಿ ಸಾಮಗ್ರಿ ಖರೀದಿಸಲು ಹೋಗಿದ್ದಾಗ ಬಿದ್ದಿದ್ದ ಆಭರಣವು ಕಬೀರ್ಗೆ ಸಿಕ್ಕಿತ್ತು.
ಬೆಲೆಬಾಳುವ ಚಿನ್ನದ ಬ್ರಾಸ್ಲೆಟ್ ಅನ್ನು ಕಬೀರ್ ಅವರು ಶ್ರೀಧರ ಆಚಾರ್ಯ ಅವರ ಕುಟುಂಬಕ್ಕೆ ಸುರಕ್ಷಿತವಾಗಿ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.