ಉಡುಪಿ, ಏ.08(DaijiworldNews/TA) : ಮಣಿಪಾಲದ ಟೈಗರ್ ಸರ್ಕಲ್ ಸಮೀಪದ ಕೆನರಾ ಬ್ಯಾಂಕ್ ಪ್ರಧಾನ ಕಚೇರಿ ಸರ್ಕಲ್ ಬಳಿ ಇದ್ದ ಸುಮಾರು ಐದು ದಶಕಗಳ ಹಿಂದಿನ, ಶಿಥಿಲಾವಸ್ಥೆಯಲ್ಲಿದ್ದ ಕುಡಿಯುವ ನೀರಿನ ಟ್ಯಾಂಕ್ ಅನ್ನು ಮಂಗಳವಾರ ಧ್ವಂಸಗೊಳಿಸಿದ ಘಟನೆ ನಡೆಯಿತು.


ಶಿಥಿಲಾವಸ್ಥೆಯಲ್ಲಿದ್ದ ಈ ನೀರಿನ ಟ್ಯಾಂಕ್ ಅನ್ನು ಉಡುಪಿ ನಗರಸಭೆ ವತಿಯಿಂದ ಮೂರು ಕ್ರೇನ್ ಬಳಸಿ ನೆಲಸಮಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೈಗಾರಿಕಾ ಪ್ರದೇಶ, ಕೆನರಾ ಬ್ಯಾಂಕ್ ಸರ್ಕಲ್ ಸುತ್ತ ಹಾಗೂ ಟೈಗರ್ ಸರ್ಕಲ್ ಮಾರ್ಗದಲ್ಲಿ ತೆರಳಲಿರುವ ವಾಹನಗಳ ಸಂಚಾರವನ್ನು ಬೆಳಗ್ಗೆ 8ಗಂಟೆಯಿಂದ ಮಧ್ಯಾಹ್ನದವರೆಗೆ ನಿರ್ಬಂಧಿಸಲಾಗಿತ್ತು.