ಮಂಗಳೂರು , ಮೇ. 19 (DaijiworldNews/AK): ಮೇ 19 ರ ಸಂಜೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ವಾಗ್ವಾದ ನಡೆದಿದ್ದು , ಇದರ ಪರಿಣಾಮವಾಗಿ ಆಸ್ತಿಪಾಸ್ತಿಗೆ ಹಾನಿಯಾಗಿದ್ದು , ಒಬ್ಬ ಕೈದಿಗೆ ಗಾಯವಾಗಿದೆ . ಅಧಿಕಾರಿಗಳು ಪೊಲೀಸ್ ದೂರು ದಾಖಲಿಸಿದ್ದು , ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಕೋರಿದ್ದಾರೆ.



ಈ ಘಟನೆ ಸಂಜೆ 6:40 ರ ಸುಮಾರಿಗೆ ಜೈಲಿನ ಕ್ವಾರಂಟೈನ್ ಸೆಲ್ ವಿಭಾಗದಲ್ಲಿ ನಡೆದಿದ್ದು , ಕೆಲವು ವಿಚಾರಣಾಧೀನ ಕೈದಿಗಳು ಕಚೇರಿ ಪ್ರದೇಶದ ಬಳಿ ನಿಂತು " ಬಿ " ಬ್ಯಾರಕ್ನಲ್ಲಿದ್ದ ಕೈದಿಗಳು ತಮ್ಮತ್ತ ನೋಡಿದರು ಎಂಬ ಕಾರಣಕ್ಕಾಗಿ ಪರಸ್ಪರ ಅವ್ಯಾಚ ಶಬ್ದಗಳೊಂದಿ ಬೈದಾಡಿಕೊಂಡು ಕೂಗಾಡಿದ್ದು, ಈ ಸಮಯದಲ್ಲಿ ಸಿಮೆಂಟ್ ಬ್ಲಾಕ್ನ್ನು ಹೊಡೆದು ಅದರ ತುಂಡುಗಳನ್ನು ಎಸೆದಿದ್ದಾರೆ ಎಂದು ವರದಿಯಾಗಿದೆ .
ಇದೇ ವೇಳೆ " ಬಿ " ಬ್ಯಾರಕ್ನ ಕೆಲವು ವಿಚಾರಣಾಧೀನ ಕೈದಿಗಳು ಒಳಗಿನ ಗೇಟ್ ಅನ್ನು ಬಲವಂತವಾಗಿ ತೆರೆದು ನ್ಯಾಯಾಂಗ ವಿಭಾಗದ ಕಚೇರಿಗೆ ಹೋಗಿ , ಅಲ್ಲಿ ಅವರು ತಮ್ಮ ಕೈಗಳಿಂದ ಬಾಗಿಲಿನ ಗಾಜಿನ ಫಲಕವನ್ನು ಹೊಡೆದು ಹಾನಿಯನ್ನುಂಟು ಮಾಡಿದರು .
ಈ ಗಲಭೆಯ ಸಮಯದಲ್ಲಿ , ಒಬ್ಬ ವಿಚಾರಣಾಧೀನ ಕೈದಿಯ ಕಾಲಿಗೆ ಗಾಯವಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದರು. ಮಂಗಳೂರು ಜಿಲ್ಲಾ ಜಿಲ್ಲಾ ಸೂಪರಿಂಟೆಂಡೆಂಟ್ ಅವರು ಬರ್ಕೆ ಪೊಲೀಸ್ ರಾಣೆಯಲ್ಲಿ ದೂರು ನೀಡಿದ್ದು , ಗಲಭೆಯಲ್ಲಿ ಭಾಗಿಯಾಗಿರುವ ಕೈದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ. ಜೈಲು ಅಧಿಕಾರಿಗಳು ಪ್ರಸ್ತುತ ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಇನ್ನು ಇಂತಹ ಘಟನೆಗಳು ಮರುಕಳಿಸದಂತೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ .