ಮಂಗಳೂರು, ಮೇ. 28 (DaijiworldNews/AA): ನಿಟ್ಟೆ ವಿಶ್ವವಿದ್ಯಾಲಯದ ವಿಜ್ಞಾನ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ ಆಹಾರ ಸುರಕ್ಷತೆ ಹಾಗೂ ಪೋಷಣೆ ವಿಭಾಗದ, ಡಾ. ಮಮತಾ ಬಿ ಎಸ್ ಇವರ ಮಾರ್ಗದರ್ಶನದಲ್ಲಿ, 'ಬಲವರ್ದಿತ ಆಹಾರದಿಂದ ಅತೀ ರಕ್ತದೊತ್ತಡವನ್ನು ನಿಯಂತ್ರಿಸುವ' ಬಗ್ಗೆ ಪ್ರಬಂಧ ಮಂಡಿಸಿ ನಿಟ್ಟೆ ವಿಶ್ವವಿದ್ಯಾನಿಲಯದಿಂದ ಡಾ. ನಿಶಿತ್ ಕುಮಾರ್ ಜೋಗಿ ಅವರು ಪಿಹೆಚ್ಡಿ ಪದವಿ ಪಡೆದಿರುತ್ತಾರೆ.

ಸುರೇಂದ್ರ ಜೋಗಿ ಮತ್ತು ಹರಿಣಾಕ್ಷಿ ದಂಪತಿಯ ಮಗನಾಗಿರುವ ನಿಶಿತ್ ಕುಮಾರ್ ಜೋಗಿ ಅವರು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ M.Sc. ಮುಗಿಸಿದ್ದಾರೆ. ಸೇಂಟ್ ಫಿಲೋಮಿನಾ ಕಾಲೇಜು ಪುತ್ತೂರಿನಲ್ಲಿ B.SC. ಮಾಡಿರುತ್ತಾರೆ. ಸರ್ಕಾರಿ ಪಿಯು ಕಾಲೇಜು ಬೆಳಿಯೂರುಕಟ್ಟೆ ಪುತ್ತೂರು ಇಲ್ಲಿ ಪಿಯುಸಿ ಮಾಡಿರುತ್ತಾರೆ.