ಮಂಗಳೂರು, ಸೆ. ೧: ಭಾರತದಿಂದ ಸಮೃದ್ಧ ವ್ಯಾಪರ ಚೀನಾಕ್ಕೆ ಆಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಚೀನಾ ದೇಶ ಭಾರತದ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ. ಹೀಗಾಗಿ ಚೀನಾದಿಂದ ಬರುವ ಯಾವುದೇ ವಸ್ತುಗಳನ್ನು ಖರೀದಿಸಬಾರದು ಎಂದು ಚೈನಾ ವಸ್ತುಗಳನ್ನು ದಹಿಸಿ ವಿಶ್ವ ಹಿಂದು ಪರಿಷತ್ ಬಜರಂಗದಳ ಕದ್ರಿ ಮೈದಾನದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದರು.
ಪಾಕಿಸ್ತಾನದ ಜೊತೆಗೆ ಕೈ ಜೋಡಿಸಿ ಭಾರತದ ಅನೇಕ ಭೂಭಾಗಗಳನ್ನು ಕಬಳಿಸಲು ಯತ್ನ ಮಾಡುತ್ತಿದೆ. ಇದು ನಮ್ಮ ದೇಶದ ದೌರ್ಭಾಗ್ಯ. ಹೀಗಾಗಿ ಚೀನಾದ ಆಟಿಕೆ ವಸ್ತುಗಳು, ಲೈಟಿಂಗ್ಸ್ ಸೇರಿ ಮೂರು ಬೆಲೆ ಬಾಳುವ ಮೊಬೈಲ್ ಫೋನ್ ದಹಿಸಿ ಚೈನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಈ ಆಂದೋಲನದಲ್ಲಿ ಸಲಹೆ ನೀಡಲಾಯಿತು. ವಿಶ್ವ ಹಿಂದು ಪರಿಷತ್ ಬಜರಂಗದಳ ಪ್ರಾಂತ ಅಧ್ಯಕ್ಷ ಎಂಬಿ ಪುರಾಣಿಕ್, ವಿಶ್ವ ಹಿಂದು ಪರಿಷತ್ ಬಜರಂಗದಳ ಪ್ರಾಂತ ಸಂಯೋಜಕ ಶರಣ್ ಪಂಪ್ವೆಲ್ ಉಪಸ್ಥಿತರಿದ್ದರು.