ಬಂಟ್ವಾಳ, ಜು. 01 (DaijiworldNews/AK): ಬಿ.ಸಿ.ರೋಡಿನ ವಿಜಯಲಕ್ಷ್ಮೀ ಸಮೂಹ ಸಂಸ್ಥೆಗಳ ಮಾಲಕ ಮರಕಡ ಶ್ರೀನಾಥ್ ಪ್ರಭು(೭೦) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೂ.೩೦ರಂದು ನಿಧನರಾಗಿದ್ದಾರೆ.

ಉದ್ಯಮಿಯಾಗಿದ್ದ ಅವರು ಕೊಡುಗೈ ದಾನಿಯಾಗಿ ಗುರುತಿಸಿಕೊಂಡಿದ್ದರು. ಬಿ.ಸಿ.ರೋಡಿನ ಹಳೆ ಎಲ್ ಐಸಿ ಕಚೇರಿಯ ಹಿಂಭಾಗದಲ್ಲಿರುವ ಅವರ ಸ್ವಗೃಹದಲ್ಲಿ ಜುಲೈ1ರಂದು ಬೆಳಗ್ಗೆ 11ಗಂಟೆಗೆ ಅಂತಿಮ ವಿಧಿ ವಿಧಾನಗಳು ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ. ಮೃತರು ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.