ಬಂಟ್ವಾಳ, ಜು. 03 (DaijiworldNews/AK): ಪಲ್ಲಮಜಲು ಕೋರೆಯಿಂದ ಲಾರಿಗಳು ಜಲ್ಲಿಕಲ್ಲು ಲೋಡ್ ಮಾಡಿಕೊಂಡು ಹೋಗುತ್ತಿದ್ದ ವೇಳೆ ಸಾರ್ವಜನಿಕರಿಂದ ಲಾರಿಗಳನ್ನು ತಡೆದು ಪ್ರತಿಭಟಿಸಿದ ಘಟನೆ ಇಂದು ನಡೆದಿದೆ.

ಪಲ್ಲಮಜಲು ಗಣಿಗಾರಿಕೆಯಿಂದ ಸ್ಥಳೀಯ ಮನೆಗಳಿಗೆ ಹಾನಿಯಾಗಿದೆ ಎಂದು ಗ್ರಾಮಸ್ಥರು ಗಣಿಇಲಾಖೆ ಹಾಗೂ ತಹಶಿಲ್ದಾರ್ ಅವರಿಗೆ ಮನವಿ ನೀಡಿದ್ದರು. ಬಳಿಕ ಗಣಿಇಲಾಖೆಯಿಂದ ಪಲ್ಲಮಜಲು ಗಣಿಗಾರಿಕೆ ನಡೆಸುವ ಮಾಲಕರಿಗೆ ನೋಟೀಸ್ ಜಾರಿ ಮಾಡಿದ್ದ ಗಣಿಗಾರಿಕೆ ಸ್ಥಳದ ಪರಿಶೀಲನೆ ನಡೆಸಿತ್ತು. ಹಾಗಾಗಿ ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಮಾಡಿದ್ದರು.
ಆದರೆ ದೂರುದಾರರಿಗೆ ಗಣಿಗಾರಿಕೆ ವಿಚಾರದಲ್ಲಿ ಯಾವುದೇ ಮಾಹಿತಿ ನೀಡದೆ ಮೌನವಾಗಿದ್ದು, ಲಾರಿಗಳ ಮೂಲಕ ಜಲ್ಲಿಕಲ್ಲು ಮತ್ತೆ ಸಾಗಾಟ ಆರಂಭಿಸಿವೆ, ಎಂದು ಇಂದು ಗ್ರಾಮಸ್ಥರು ಲಾರಿಗಳನ್ನು ತಡೆದು ಪ್ರತಿಭಟಿಸಿದಾಗ ,ಲಾರಿ ಚಾಲಕರು ಜಲ್ಲಿಕಲ್ಲುಗಳನ್ನು ವಾಪಸುಕೋರೆಯಲ್ಲಿ ಡಂಪ್ ಮಾಡಿದ ಘಟನೆ ನಡೆದಿದೆ ಎಂದು ತಿಳಿಸಲಾಗಿದೆ.